ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟ: 11,000 ಜನರ ಸ್ಥಳಾಂತರಕ್ಕೆ ಸರ್ಕಾರ ಆದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಡೋನೇಷ್ಯಾದ ದ್ವೀಪವೊಂದರಲ್ಲಿ ಬುಧವಾರ ಜ್ವಾಲಾಮುಖಿ ಸ್ಫೋಟಗೊಂಡಿದೆ. ಪರಿಣಾಮ ಇಂಡೋನೇಷ್ಯಾ ಸರ್ಕಾರವು ಪರ್ವತದ ಬಳಿ ಇರುವ 11,000 ಜನರನ್ನು ತಕ್ಷಣವೇ ಸ್ಥಳಾಂತರಿಸಲು ಆದೇಶಿಸಿತು.

ಈ ಜ್ವಾಲಾಮುಖಿಯಿಂದ ಯಾವುದೇ ಸಂಭವನೀಯ ಸಾವುನೋವುಗಳು ವರದಿಯಾಗಿಲ್ಲ.

ಉತ್ತರ ಇಂಡೋನೇಷ್ಯಾದ ಸುಲವೇಸಿ ದ್ವೀಪದಲ್ಲಿರುವ ಮೌಂಟ್ ದ್ವೇಪದರುವಾಂಗ್ ಮೇಲೆ ಜ್ವಾಲಾಮುಖಿ ಸ್ಫೋಟಗೊಂಡಿದೆ. ಈ ಜ್ವಾಲಾಮುಖಿ ಒಂದೇ ದಿನದಲ್ಲಿ ಐದು ಬಾರಿ ಸ್ಫೋಟಿಸಿದ್ದು. ಪರ್ವತವು ಸಮುದ್ರಕ್ಕೆ ಸಮೀಪದಲ್ಲಿರುವ ಕಾರಣ ಸುನಾಮಿ ಸಂಭವಿಸುವ ಸಾಧ್ಯತೆಯ ಬಗ್ಗೆ ಸರ್ಕಾರ ಬಲವಾದ ಎಚ್ಚರಿಕೆ ನೀಡಿದೆ. ಉತ್ತರ ಸಮುದ್ರದ ತಗುಲಂಡಂಗ್‌ ದ್ವೀಪದ 11,000 ನಿವಾಸಿಗಳಿಗೆ ಪರ್ವತದಿಂದ 6 ಕಿಮೀ ದೂರದಲ್ಲಿರುವಂತೆ ಎಚ್ಚರಿಕೆ ನೀಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!