ಪಿವಿಆರ್-ಐನಾಕ್ಸ್​ನಲ್ಲಿ ಕೇವಲ 99 ರೂಪಾಯಿಗೆ ಸಿನಿಮಾ ವೀಕ್ಷಿಸಿ, ಇದೆಂಥಾ ಆಫರ್‌??

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಿನಿಪ್ರಿಯರಿಗೆ ಇದು ಸಿಹಿ ಸುದ್ದಿಯಾಗಿದೆ. ಐನಾಕ್ಸ್‌ ಹಾಗೂ ಪಿವಿಆರ್‌ ಕಡೆಯಿಂದ ಭರ್ಜರಿ ಆಫರ್‌ ಹೊರಬಿದ್ದಿದ್ದು, ಕೇವಲ 99 ರೂಪಾಯಿಗಳಲ್ಲಿ ಸಿನಿಮಾ ವೀಕ್ಷಣೆ ಮಾಡಬಹುದಾಗಿದೆ.

ನಾಳೆ ಸಿನಿಮಾ ಪ್ರೇಮಿಗಳ ದಿನ, ಹಾಗಾಗಿ ಏಪ್ರಿಲ್‌ 19 ರಂದು ಪಿವಿಆರ್‌,ಐನಾಕ್ಸ್‌ ಅನೇಕ ಮಲ್ಟಿಪ್ಲೆಕ್ಸ್‌ ಚೈನ್‌ಗಳು ಬರೀ 99 ರೂಪಾಯಿಗೆ ಸಿನಿಮಾ ನೋಡುವ ಅವಕಾಶ ನೀಡಿವೆ.

ನಾಳೆ ರಿಲೀಸ್‌ ಆಗಲಿರುವ ಲವ್‌, ಸೆಕ್ಸ್‌ ಔರ್‌ ದೋಖಾ ಹಾಗೂ ದೋ ಔರ್‌ ದೋ ಪ್ಯಾರ್‌ ಸಿನಿಮಾಗಳಿಗೆ ಇದೊಂದು ದೊಡ್ಡ ಪ್ಲಸ್‌ ಪಾಯಿಂಟ್‌ ಆಗಲಿದೆ.

ಮಾಮೂಲಿ ದಿನಗಳಲ್ಲಿ ಕಡಿಮೆ ಎಂದರೂ 150-300 ರವರೆಗೂ ಟಿಕೆಟ್‌ ಬೆಲೆ ಇರುತ್ತದೆ. ಇದರ ಜೊತೆಗೆ ಇಂಟರ್ವಲ್‌ ಸ್ನಾಕ್ಸ್‌ ಇನ್ನೂ ದುಬಾರಿಯಾಗಿದೆ. ಈಗ ಸಿನಿಮಾಗಳಿಗೆ ಕೇವಲ 99 ರೂಪಾಯಿ ಪಾವತಿಸಿ ಸಿನಿಮಾ ನೋಡಿ ಬಂದು ಹೊರಗೆ ತಿನ್ನುವ ಪ್ಲಾನ್‌ನ್ನು ಸಿನಿಪ್ರಿಯರು ಮಾಡಿದ್ದಾರೆ.

ಕಳೆದ ವರ್ಷ ಕೂಡ ಸಿನಿಮಾ ಪ್ರೇಮಿಗಳ ದಿನದಂದು ದರ ಕಡಿಮೆ ಮಾಡಿದ್ದು, ಉತ್ತಮ ರೆಸ್ಪಾನ್ಸ್‌ ಸಿಕ್ಕಿತ್ತು. ಇದರಿಂದ ಈ ವರ್ಷ ಕೂಡ ಹೆಚ್ಚು ಜನ ಸಿನಿಮಾ ನೋಡುವ ನಿರೀಕ್ಷೆ ಇದೆ. ಮೈದಾನ್‌, ಮಂಜುಮ್ಮೇಲ್‌ ಬಾಯ್ಸ್‌, ಬಡೇ ಮಿಯಾ ಚೋಟೆ ಮಿಯಾ ಸಿನಿಮಾಗಳ ಗಳಿಕೆಗೂ ಈ ಆಫರ್‌ ಸಹಾಯ ಆಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!