ಟ್ವಿಟರ್‌ ನಲ್ಲಿ ಪಾವತಿ ಚಟುವಟಿಕೆ ಸ್ಥಗಿತಗೊಳಿಸಿದ ವೋಕ್ಸ್‌ ವ್ಯಾಗನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜಗತ್ತಿನ ಅತಿ ದೊಡ್ಡ ಕಾರು ತಯಾರಕ ಕಂಪನಿ ವೋಕ್ಸ್‌ ವ್ಯಾಗನ್‌ ಟ್ವಿಟರ್‌ ನಲ್ಲಿ ತನ್ನ ಪಾವತಿ ಚಟುವಟಿಕೆಯನ್ನು ಸ್ಥಗಿತಗೊಳಿಸಿದೆ. ಅಲ್ಲದೇ ತನ್ನ ಇತ ಬ್ರ್ಯಾಂಡ್‌ ಗಳಿಗೂ ಟ್ವಿಟರ್‌ ನಲ್ಲಿ ಪಾವತಿ ಚಟುವಟಿಕೆಗಳನ್ನು ನಡೆಸದಂತೆ ನಿರ್ದೇಶಿಸಿದೆ.

ಟೆಸ್ಲಾ ಮಾಲೀಕ ಬಿಲಿಯನೇರ್‌ ಎಲಾನ್‌ ಮಸ್ಕ್‌ ಟ್ವಿಟರ್‌ ಮಾಲೀಕತ್ವ ವಹಿಸಿಕೊಂಡ ವಾರಗಳ ನಂತರ ಈ ಬೆಳವಣಿಗೆ ನಡೆದಿದೆ. ಈ ಕುರಿತು ಕಂಪನಿಯು ತನ್ನ ಇತರ ಬ್ರ್ಯಾಂಡ್‌ ಗಳಾದ ಲಾಂಬರ್‌ಗಿನಿ, ಆಡಿ, ಸ್ಕೋಡಾ, ಡುಕಾಟಿ, ಪೋರ್ಶೇ ಇತ್ಯಾದಿ ಪ್ರಸಿದ್ಧ ಬ್ರ್ಯಾಂಡ್‌ ಗಳ ಮಾಲೀಕತ್ವವನ್ನು ಹೊಂದಿದ್ದು ಅವುಗಳಿಗೂ ಸಹ ಪಾವತಿ ಚಟುವಟಿಕೆ ನಡೆಸದಂತೆ ತಾಕೀತು ಮಾಡಿದೆ ಎನ್ನಲಾಗಿದೆ.

ನಾವು ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದ್ದೇವೆ ಮತ್ತು ಬೆಳವಣಿಗೆಗಳನ್ನು ಅವಲಂಬಿಸಿ ಮುಂದಿನ ಹಂತಗಳನ್ನು ನಿರ್ಧರಿಸುತ್ತೇವೆ” ಎಂದು ಆಡಿ ವಕ್ತಾರರು ತಿಳಿಸಿರುವುದಾಗಿ ಸುದ್ದಿ ಸಂಸ್ಥೆ ರಾಯಿಟರ್ಸ್‌ ವರದಿ ಮಾಡಿದೆ.

ಈ ಹಿಂದೆ ಪ್ರತಿದಿನವೂ ಟ್ವೀಟ್‌ ಮಾಡುತ್ತಿದ್ದ ಆಡಿ ಕಂಪನಿಯು ನವೆಂಬರ್‌ 1 ರಿಂದ ಟ್ವೀಟ್‌ ಮಾಡಿಲ್ಲ ಎನ್ನಲಾಗಿದೆ. ಅಕ್ಟೋಬರ್‌ ಅಂತ್ಯದಲ್ಲಿ ಮಸ್ಕ್‌ ಟ್ವಿಟರ್‌ ಮಾಲೀಕತ್ವ ಪಡೆದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!