ಚಿರತೆ ಭಯಕ್ಕೆ ಕೆಆರ್‌ಎಸ್ ಬೃಂದಾವನ ಬಂದ್: 15 ದಿನಕ್ಕೆ 50 ಲಕ್ಷಕ್ಕೂ ಹೆಚ್ಚು ನಷ್ಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಂಸ್ಕೃತಿಕ ನಗರಿ ಮಯಸೂರಿನ ಪ್ರವಾಸಿ ತಾಣ ಕೆಆರ್‌ಎಸ್ ಬೃಂದಾವನ ಕಳೆದ 15 ದಿನಗಳಿಂದ ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿದೆ.

ಅಕ್ಟೋಬರ್ 21 ರಿಂದ ಬೃಂದಾವಣ ಗಾರ್ಡನ್‌ನಲ್ಲಿ ನಾಲ್ಕು ಬಾರಿ ಚಿರತೆ ಕಾಣಿಸಿದ್ದು, ಚಿರತೆ ದಾಳಿ ಭೀತಿಯಿಂದ ಬೃಂದಾವನ ಗಾರ್ಡನ್‌ನ್ನು ಮುಚ್ಚಲಾಗಿದೆ. ನವೆಂಬರ್ ೬ರಿಂದ ಬೃಂದಾವನ ಗಾರ್ಡನ್ ಮುಚ್ಚಲಾಗಿದ್ದು, ಪ್ರವಾಸಿಗರಿಲ್ಲದೆ ಆದಾಯ ನಷ್ಟವಾಗಿದೆ.

ಕಾವೇರಿ ನೀರಾವರಿ ನಿಗಮಕ್ಕೆ 50 ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ. ಇನ್ನೂ ಚಿರತೆ ಸಿಕ್ಕಿಲ್ಲವಾದ್ದರಿಂದ ಇನ್ನಷ್ಟು ದಿನ ಗಾರ್ಡನ್ ಮುಚ್ಚಿಯೇ ಇರುವ ಸಾಧ್ಯತೆ ಇದೆ. ಈಗಾಗಲೇ ನಾಲ್ಕು ಬಾರಿ ಚಿರತೆ ಕಾಣಿಸಿರುವುದರಿಂದ ಮುಂಜಾಗ್ರತಾ ಕ್ರಮವಾಗಿ, ಚಿರತೆ ಹಿಡಿಯುವವರೆಗೂ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು.

ಬೃಂದಾವನಕ್ಕೆ ವಾರದ ದಿನಗಳಲ್ಲಿ ಒಟ್ಟಾರೆ ಮೂರು ಸಾವಿರ ಮಂದಿ ಭೇಟಿ ನೀಡುತ್ತಾರೆ. ಇನ್ನು ವೀಕೆಂಡ್‌ನಲ್ಲಿ ಇನ್ನೂ ಹೆಚ್ಚು ಮಂದಿ ಭೇಟಿ ನೀಡುತ್ತಾರೆ. ಆದರೆ ಈಗ ಪ್ರವಾಸಿಗರಿಲ್ಲದೆ ಬೃಂದಾವನ ಬಂದ್ ಆಗಿರುವುದರಿಂದ 50ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ.

ಬೃಂದಾವನ ಎಂಟ್ರಿಗೆ ತಲಾ 50 ರೂಪಾಯಿ ನಿಗದಿಪಡಿಸಲಾಗಿದೆ. ಇನ್ನು ಸ್ಥಳೀಯ ವ್ಯಾಪಾರಿಗಳು ಪ್ರವಾಸಿಗರಿಲ್ಲದೆ ಆದಾಯ ಕಳೆದುಕೊಂಡಿದ್ದಾರೆ. 15 ದಿನಗಳಾದರೂ ಚಿರತೆ ದೊರಕಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಚಿರತೆ ಹಿಡಿಯಲು ಎಲ್ಲ ರೀತಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!