ಕಾಂಗ್ರೆಸ್ ನಿಂದ ವೋಟ್ ಬ್ಯಾಂಕ್ ರಾಜಕಾರಣ: ಬಿ.ಎಸ್.ಯಡಿಯೂರಪ್ಪ

ಹೊಸದಿಗಂತ ವರದಿ,ಕಲಬುರಗಿ:

ಕಾಂಗ್ರೆಸ್ ಪಕ್ಷ ಕೇವಲ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಾ ಓಬಿಸಿ ಜನಾಂಗದ ಜನರನ್ನು ಮುಖ್ಯವಾಹಿನಿಗೆ ತರದೆ,ದ್ರೋಹದ ಕೆಲಸ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುಡುಗಿದ್ದಾರೆ.

ಅವರು ಹಿಂದೂಳಿದ ವಗ೯ಗಳ ವಿರಾಟ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿ, ಇಲ್ಲಿ ನೆರೆದ ಹಿಂದೂಳಿದ ವಗ೯ಗಳ ಜನಸಮೂಹವೇ ಕಾಂಗ್ರೆಸ್ ಪಕ್ಷಕ್ಕೆ ಉತ್ತರ ಎಂದರು.

ಮೈಸೂರಿನಿಂದ ಒಂದು ರಥಯಾತ್ರೆಯಲ್ಲಿ ನಾನು ಬರಲಿದ್ದೇನೆ.ಕಲ್ಯಾಣ ಕನಾ೯ಟಕದಿಂದ ಬಸವರಾಜ ಬೊಮ್ಮಾಯಿ ಅವರು ರಥಯಾತ್ರೆ ಮೂಲಕ ಬರುತ್ತಾರೆ.ಕೊನೆಗೆ ದಾವಣಗೆರೆ ಜಿಲ್ಲೆಯಲ್ಲಿ ಎಂಟು ಲಕ್ಷ ಜನರ ಬೃಹತ್ ಸಮಾವೇಶ ಮಾಡುತ್ತೇವೆ ಎಂದು ಹೇಳಿದರು.

ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಹಣ ಬಲ,ಹೆಂಡದ ಬಲ,ಅಧಿಕಾರ ಬಲ,ಜಾತಿ ವಿಷ ಬೀಜದ ಮೂಲಕ ಅಧಿಕಾರಕ್ಕೆ ಬರುತ್ತೇವೆ ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ಪಕ್ಷ ಮುಳುಗಿ ಹೋಗಿದೆ. ಈ ಸಮಾವೇಶದಲ್ಲಿ ಲಕ್ಷಾಂತರ ಜನ ಸೇರುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಉತ್ತರ ಕೊಟ್ಟಿದ್ದಿರಾ ಎಂದು ಅಭಿನಂದನೆಗಳು ತಿಳಿಸಿದರು.

ನನ್ನ ಮುಖ್ಯ ಮಂತ್ರಿ ಅವಧಿಯಲ್ಲಿ ಒಕ್ಕಲಿಗ ಸಮುದಾಯ ಅಭಿವೃದ್ಧಿ ಗೆ 500 ಕೋಟಿ,ವೀರಶೈವ,ಮರಾಠಾ ಅಭಿವೃದ್ಧಿ ಗೆ ತಲಾ 500 ಕೋಟಿ ಕೊಟ್ಟಿದ್ದೇನೆ.ಮುಂಬರುವ ದಿನಗಳಲ್ಲಿ ನಮ್ಮ ಪಕ್ಷ ಮತ್ತೆ ಅಧಿಕಾರಕ್ಕೆ ಬಂದು ಎಲ್ಲಾ ಸಮುದಾಯವರಿಗೆ ನ್ಯಾಯ ಕೊಡಿಸುವಂತಹ ಅಭಿವೃದ್ಧಿ ಕೆಲಸ ನಮ್ಮಿಂದಾಗಲಿವೆ ಎಂದು ಭರವಸೆ ನೀಡಿದರು.

ಕೋಲಿ ಸಮಾಜದ ನಾಯಕ ಬಾಬುರಾವ್ ಚಿಂಚನಸೂರ ಅವರನ್ನು ಜನರು ಬಹಳ ನಂಬಿದ್ದಾರೆ. ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಕೋಲಿ ಸಮಾಜದ ಒಂದು ಮತ ಸಹ ಕಾಂಗ್ರೆಸ್, ಗೆ ಹೋಗಬಾರದು ಎಂದು ಕರೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!