Wednesday, November 30, 2022

Latest Posts

ಹಿಂದುಳಿದ ವರ್ಗದವರನ್ನು ಕತ್ತಲಲ್ಲಿಟ್ಟ ಸಿದ್ದರಾಮಯ್ಯ: ಸಿಎಂ ಬೊಮ್ಮಾಯಿ

ಹೊಸದಿಗಂತ ವರದಿ,ಕಲಬುರಗಿ:

ಹಿಂದುಳಿದ ಸಮುದಾಯಗಳನ್ನು ಬರೀ ಮತಗಳ ಸಲುವಾಗಿ ಬಳಸಿಕೊಂಡು ಅವುಗಳನ್ನು ಕತ್ತಲಲ್ಲಿಟ್ಟು ದ್ರೋಹ ಬಗೆದ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಇನ್ನೂ ಉಳಿಗಾಲವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ನಾಗನಹಳ್ಳಿಯ ರದ್ದೇವಾಡಗಿ ಲೇಔಟ್,ನಲ್ಲಿ ಹಮ್ಮಿಕೊಂಡಿದ್ದ ಹಿಂದೂಳಿದ ವಗ೯ಗಳ ರಾಜ್ಯ ಮಟ್ಟದ ವಿರಾಟ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.

ಬದಲಾವಣೆ ಕಾಲ ಬಂದಿದೆ. ಹಿಂದುಳಿದ ವಗ೯ದ ನಾಯಕರಾಗಿ ಹಿಂದುಳಿದ ವಗ೯ವನ್ನು ಕತ್ತಲಲ್ಲಿ ಇಟ್ಟ ಸಿದ್ದರಾಮಯ್ಯ,ಗೆ ಬದಲಾವಣೆ ಮಾಡುವ ಕಾಲ ಬಂದಿದೆ. ಎಲ್ಲರಿಗೂ ಎಲ್ಲ ಕಾಲಕ್ಕೆ ಮೋಸ ಮಾಡಲು ಸಾಧ್ಯವಿಲ್ಲ ಎಂದರು. ಕುರುಬ ಸಮುದಾಯಕ್ಕೆ ಒಂದು ಸಚಿವ ಸ್ಥಾನ ಕೂಡ ಕೊಡಲಿಲ್ಲ. ಹಿಂದೂಳಿದ ವಗ೯ಗಳ ಅಭಿವೃದ್ಧಿ ಗೆ ಮುಂದಾಗಲಿಲ್ಲ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಬಿಜೆಪಿ ಸಕಾ೯ರ ಸಂಗೋಳ್ಳಿ ರಾಯಣ್ಣನ ಹೆಸರಿನಲ್ಲಿ ಮಿಲಿಟರಿ ಶಾಲೆ ಮಾಡಿದೆ.ಇದೀಗ ಹಿಂದೂಳಿದ ವಗ೯ಗಳನ್ನು ಕತ್ತಲೆಯಿಂದ ಹೊರತಂದು ಮುಖ್ಯ ವಾಹಿನಿಗೆ ತರುವ ಕಾಲ ಬಂದಿದೆ ಎಂದರು.

ಮೊನ್ನೆ ನಾನು ಎಸ್ಸಿ,ಎಸ್ಟಿ ಮೀಸಲಾತಿ ನೀಡಿದ್ದೇನೆ.ಇದಕ್ಕೆ ಸಿದ್ದರಾಮಯ್ಯ ಹೇಳುತ್ತಾರೆ,ಇದರಲ್ಲಿ ನಮ್ಮ ಪಾತ್ರ ಮುಖ್ಯ ಇದೆ ಎಂದು, ಆದರೆ ನಮ್ಮ ಕಡೆ ಒಂದು ಗಾದೆ ಮಾತಿದೆ,ಪಕ್ಕದ ಮನೆಯವರ ಗಂಡು ಮಗು ಹುಟ್ಟಿಸಿದರೆ,ಇವರು ಊರು ತುಂಬಾ ಸಿಹಿ ಹಂಚಿದ್ದರು ಎಂದು ಕಿಚಾಯಿಸಿದರು.

ಹಿಂದೂಳಿದ ವಗ೯ದವರು ಸ್ವಾಭಿಮಾನ ಹಾಗೂ ಸ್ವಾವಲಂಬಿ ಜೀವನ ನಡೆಸಬೇಕೆಂಬ ಪರಿಕಲ್ಪನೆಯನ್ನು ಇಟ್ಟುಕೊಂಡು ಸಾಮಾಜಿಕ ನ್ಯಾಯ ಕೊಟ್ಟಿದ್ದೇವೆ. ಆದರೆ 50 ವಷ೯ಗಳ ಆಡಳಿತ ನೀಡಿದ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಎನೂ ಕೊಡುಗೆ ನೀಡಿದ್ದಾರೆ ಎಂದು ಪ್ರಶ್ನಿಸಿದರು.

ಕುರುಬ ಸಮುದಾಯಕ್ಕೆ ಇದೀಗ ಅಮೃತ ಸಹಾಯ ಯೋಜನೆಯಡಿ 364 ಕೋಟಿ ಅನುದಾನ ನೀಡಿದ್ದೇವೆ.ಕುರಿಗಾಹಿಯ ಮೂಲಕ ಬಂದ ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಕುರುಬರಿಗೆ ಎನ್ ನೀಡಿದ್ದಾರೆ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!