ಬಜರಂಗಿಯ ಪರವಾಗಿರಲಿ ನಿಮ್ಮ ಮತದಾನ: ಕೃಷ್ಣ ಜೋಶಿ ಕರೆ

ಹೊಸದಿಗಂತ ವರದಿ ಕಲಬುರಗಿ:

ನಾಳೆಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಮ್ಮೆಲ್ಲರ ಅಮೂಲ್ಯವಾದ ಮತವನ್ನು ಬಜರಂಗಿಯ ಪರವಾಗಿ, ಹನುಮನ ಶಕ್ತಿಯ ಪರವಾಗಿ ಚಲಾಯಿಸುವ ಮೂಲಕ ನಿಷೇಧ ಮಾಡುವ ರಾಜಕೀಯ ಪಕ್ಷಗಳಿಗೆ ಪ್ರತ್ಯುತ್ತರ ನೀಡಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕನಾ೯ಟಕ ಉತ್ತರ ಪ್ರಾಂತ್ಯದ ಬೌದ್ಧಿಕ ಪ್ರಮುಖರಾದ ಕೃಷ್ಣ ಜೋಶಿ ಕರೆ ನೀಡಿದರು.

ಅವರು ಮಂಗಳವಾರ ನಗರದ ಲಾಲ್ ಹನುಮಾನ್ ಮಂದಿರದಲ್ಲಿ ವಿಶ್ವಹಿಂದೂ ಪರಿಷತ್, ಬಜರಂಗದಳ ವತಿಯಿಂದ ಆಯೋಜಿಸಿದ್ದ ಹನುಮಾನ್ ಚಾಲಿಸ್ ಪಠಣ ಕಾಯ೯ಕ್ರಮದಲ್ಲಿ ಭಾಗವಹಿಸಿ ಮಾತನಾಡಿ,ನಾವು ಒಬ್ಬೊಬ್ಬ ವ್ಯಕ್ತಿ ನೂರು ಮತಗಳನ್ನು ಹಾಕಿಸುವ ಜವಾಬ್ದಾರಿ ಹೊತ್ತಬೇಕಾಗಿದೆ. ಸಮಾಜ ಸೇವೆಗೆ ಪ್ರೇರಣೆ ನೀಡುವಂತಹ ಬಜರಂಗದಳ ಸಂಘಟನೆಯನ್ನು ನಿಷೇಧ ಮಾಡುತ್ತೇವೆ ಎಂದು ಒಂದು ರಾಜಕೀಯ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದು, ಹೀಗಾಗಿ ಆಂಜನೇಯನ ಶಕ್ತಿ ಎಷ್ಟು ಬಲಿಷ್ಠವಾಗಿದೆ ಎಂಬುದನ್ನು ಸಾಬೀತು ಪಡಿಸಲು ನಾವೆಲ್ಲರೂ ಬಜರಂಗಿಯ ಹೆಸರಿನಲ್ಲಿ ಮತ ಚಲಾವಣೆ ಮಾಡಬೇಕು ಎಂದರು.

ಬಜರಂಗದಳವನ್ನು ಮತ್ತು ಭಯೋತ್ಪಾದಕರ ಉಗ್ರ ಸಂಘಟನೆಯನ್ನು ಒಂದೆ ತಕ್ಕಡಿಯಲ್ಲಿ ತುಲನೆ ಮಾಡುವಂತಹ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದ್ದು,ಅದರ ವಿರುದ್ಧ ಈ ನಮ್ಮ ಹನುಮಾನ್ ಚಾಲಿಸಾ ಪಠಣ ಕಾಯ೯ಕ್ರಮ ಆಯೋಜಿಸಲಾಗಿದೆ. ಹನುಮನ ಶಕ್ತಿಯನ್ನು ಮನಸ್ಸಿನಲ್ಲಿ ಆರಾಧನೆ ಮಾಡಿ,ನಮ್ಮ ಮತ ಹನುಮನ ಪರವಾಗಿದೆ.ಹನುಮನ ವಿರೋಧ ಮಾಡುವವರಿಗೆ ಇಲ್ಲ ಎಂದು ಸಂದೇಶ ರವಾನಿಸಿ ಎಂದು ಕರೆ ನೀಡಿದರು.

ಇದಕ್ಕೂ ಮುನ್ನ ನೂರಾರು ಹಿಂದೂ ಕಾಯ೯ಕತ೯ರು ಲಾಲ್ ಹನುಮಾನ್ ಮಂದಿರದಲ್ಲಿ ಹನುಮಾನ್ ಚಾಲಿಸಾ ಪಠಣ ಮಾಡಿ,ವಿಶೇಷ ಪೂಜೆ-ಮಹಾ ಮಂಗಳಾರತಿ ನೆರವೆರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!