ಗೀತಾಗೆ ವೋಟ್‌ ಕೊಟ್ಟು ನೋಡಿ, ಕೆಲಸ ಸರಿಯಾಗಿ ಮಾಡದಿದ್ರೆ ಹೆಸ್ರು ಬದಲಾಯಿಸ್ಕೋತಿನಿ: ಶಿವರಾಜ್‌ಕುಮಾರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಶಿವರಾಜ್‌ಕುಮಾರ್‌ ಪತ್ನಿ ಗೀತಾ ಶಿವರಾಜ್‌ಕುಮಾರ್‌ ಶಿವಮೊಗ್ಗದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.

ಹೀಗಾಗಿ ಶಿವರಾಜ್‌ಕುಮಾರ್‌ ಶಿವಮೊಗ್ಗದಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಗೀತಾ ಕೆಲಸ ಅಚ್ಚುಕಟ್ಟು, ಅವರನ್ನು ಒಮ್ಮೆ ಗೆಲ್ಲಿಸಿನೋಡಿ, ಅವರು ಕೆಲಸ ಮಾಡಿಲ್ಲ ಅಂದ್ರೆ ನನ್‌ ಹೆಸ್ರು ಬದಲಾಯಿಸ್ಕೊಳ್ತಿನಿ ಎಂದು ಹೇಳಿದ್ದಾರೆ.

ಅವರು ನಮ್ಮ ಶಿವಮೊಗ್ಗ ನಗರಕ್ಕೆ ಉತ್ತಮ ಅಭ್ಯರ್ಥಿ ಅವರನ್ನು ಈ ಬಾರಿ ಗೆಲ್ಲಿಸಿ ನೋಡಿ, ನನ್ನ ಮೇಲೂ ಭರವಸೆ ಇಡಿ. ಯಾವ ಕೆಲಸ ಬೇಕು ಎಲ್ಲವೂ ಆಗುತ್ತದೆ. ಶಿವಮೊಗ್ಗದ ವೇಗ ಅಭಿವೃದ್ಧಿಗೆ ಕೆಲಸ ಮಾಡುತ್ತೇವೆ ಎಂದು ಜನರ ಮನವೊಲಿಸಲು ಪ್ರಯತ್ನಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!