ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತು, ಡೆತ್ ನೋಟ್ ಬರೆದು ಪತಿ ಆತ್ಮಹತ್ಯೆಗೆ ಶರಣು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ, ಪತ್ನಿಯ ಕಿರುಕುಳ ತಾಳಲಾರದೆ ಗೋಡೆಯ ಮೇಲೆ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸೈಯದ್ ಅಕ್ಮಲ್ ಅನ್ಸರ್ (34) ಆತ್ಮಹತ್ಯೆ ಮಾಡಿಕೊಂಡ ಪತಿ. ಅವರ ಪತ್ನಿ ಖತೀಜತುಲ್ ಕುಬ್ರಾ, ಪತ್ನಿಯ ಸಂಬಂಧಿಕರಾದ ಅಖೀಬ್, ಅಬ್ದುಲ್ ರಹಮ್ಮಾನ್ ಮನ್ಸೂರ್ ಸೇರಿದಂತೆ ಏಳು ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಪತ್ನಿಯೊಂದಿಗೆ ಶಾಮೀಲಾಗಿ ಪತಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಏಳು ಮಂದಿ ವಿರುದ್ಧ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಜೆ.ಪಿ.ಮಾರ್ಗನ್ ನಲ್ಲಿ ಎಂಜಿನಿಯರ್ ಆಗಿದ್ದಅಕ್ಮಲ್ ಅನ್ಸರ್ ಏಳು ವರ್ಷಗಳ ಹಿಂದೆ ಕುಬ್ರಾ ಅವರನ್ನು ವಿವಾಹವಾದರು. ಗೋವಿಂದಪುರದ ಫ್ಲಾಟ್ ಒಂದರಲ್ಲಿ ವಾಸವಿದ್ದ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ಪತ್ನಿಗೆ ಗಂಡನ ಮೇಲೆ ಅನುಮಾನವಿತ್ತು. ಹೆಚ್ಚು ಹಣ ಕೊಡುವಂತೆ ಕಿರುಕುಳ ನೀಡುತ್ತಿದ್ದಳು. ಒಂದು ತಿಂಗಳ ಹಿಂದೆ ತನ್ನ ಪತಿಯೊಂದಿಗೆ ಜಗಳ ಮಾಡಿಕೊಂಡು ಬಿಟಿಎಂ ಲೇಔಟ್‌ನಲ್ಲಿರುವ ತನ್ನ ತಾಯಿಯ ಮನೆಗೆ ಕುಬ್ರಾ ಬಂದಿದ್ದಳು. ಆ ವೇಳೆ ಅಕ್ಮಲ್ ಅನ್ಸರ್ ಅಪಾರ್ಟ್ ಮೆಂಟ್ ನಲ್ಲಿ ಒಬ್ಬರೇ ಇದ್ದರು ಎನ್ನಲಾಗಿದೆ. ಆದರೆ ಮಾರ್ಚ್ 12 ರಂದು ಗೋಡೆಯ ಮೇಲೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!