ಹೆಬ್ಬಾಳ್ಕರ್‌ ಮಗನಿಗೆ ಮತ ಹಾಕಿ, ನಾನು ಅಂತ ತಿಳ್ಕೊಂಡೇ ವೋಟ್‌ ಮಾಡಿ: ಸಿದ್ದರಾಮಯ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚುನಾವಣೆಯಲ್ಲಿ ನಿಂತಿರುವುದು ಲಕ್ಷ್ಮೀ ಹೆಬ್ಬಾಳ್ಕರ್​ ಮಗ ಮೃಣಾಲ ಅಲ್ಲ ನಾನು ಅಂದುಕೊಂಡು ಮತ ಹಾಕಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಕಾಂಗ್ರೆಸ್​ ಅಧಿಕಾರಕ್ಕೆ ಬರಬೇಕಾ ಅಥವಾ ಸುಳ್ಳು ಹೇಳಿಕೊಂಡು ತಿರುಗಾಡುತ್ತಿರುವ ಮೋದಿ ಸರ್ಕಾರ ಅಧಿಕಾರಕ್ಕೆ ಬರಬೇಕಾ ಎಂಬುದುನ್ನು ನೀವೇ ನಿರ್ಧರಿಸಿ, ಎಲ್ಲವೂ ನಿಮ್ಮ ಕೈಯಲ್ಲೇ ಇದೆ. ನೀವು ಹಾಕಿದ್ದೇ ಮತ ಎಂದು ಹೇಳಿದ್ದಾರೆ.

ನೀವು ಕಾಂಗ್ರೆಸ್​ ಅಭ್ಯರ್ಥಿಗೆ ಆಶೀರ್ವಾದ ಮಾಡಿದರೆ ನನಗೆ ಮಾಡಿದಂತಾಗುತ್ತದೆ. ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಅಲ್ಲ ನಾನೇ ಅಭ್ಯರ್ಥಿಯಾಗಿ ನಿಂತಿದ್ದೇನೆ ಎಂದುಕೊಂಡು ಮತಹಾಕಿ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!