ಮೋದಿಯವರ ಕೈ ಬಲಪಡಿಸಲು ನನ್ನನ್ನು ಬೆಂಬಲಿಸಿ ಆಯ್ಕೆ ಮಾಡಿ: ಯದುವೀರ್

ಹೊಸದಿಗಂತ ವರದಿ, ಮೈಸೂರು: 
  
 ಭಾರತದ ಅಭಿವೃದ್ಧಿಗೆ ಮೋದಿಯವರ ಕೈ ಬಲಪಡಿಸಲು ನನ್ನನ್ನು ಲೋಕಸಭೆ ಚುನಾವಣೆಯಲ್ಲಿ ಬೆಂಬಲಿಸಿ, ಸಂಸದನಾಗಿ ಆಯ್ಕೆ ಮಾಡಬೇಕೆಂದು  ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಧುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಎಂ. ಅಪ್ಪಣ್ಣರನ್ನು ಭೇಟಿ ಮಾಡಿ ಬೆಂಬಲ ಕೋರಿದರು. ಮೈಸೂರಿನ ಸರಸ್ವತಿಪುರಂನಲ್ಲಿರುವ ರಾಜ್ಯ ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ಎಂ.ಅಪ್ಪಣ್ಣನವರ ಕಛೇರಿಗೆ ಶುಕ್ರವಾರ ಬಿಜೆಪಿ ಮುಖಂಡರೊoದಿಗೆ ಭೇಟಿ ನೀಡಿದ ಯದುವೀರ್ ಬೆಂಬಲ ಕೋರಿದರು. ಬಳಿಕ ಮಾತನಾಡಿ, ನಾಯಕ ಸಮಾಜ ಮಹಾರಾಜರ ಕಾಲದಿಂದಲೂ ಬೆಂಬಲಿಸಿಕೊoಡು ಬಂದಿದೆ. ಈ ಬಾರಿ ನಾನು ಬಿ.ಜೆ.ಪಿ, ಜೆ.ಡಿ.ಎಸ್ ನ ಸಂಯುಕ್ತ ಅಭ್ಯರ್ಥಿಯಾಗಿ ಚುನಾವಣಾ ಕಣದಲ್ಲಿ ಇದ್ದೇನೆ. ಭಾರತದ ಅಭಿವೃದ್ಧಿಗೆ ಮೋದಿಯವರ ಕೈ ಬಲಪಡಿಸಲು ನನ್ನನ್ನು ಬೆಂಬಲಿಸಬೇಕೆoದು ಮನವಿ ಮಾಡಿದರು.

 ಎಂ. ಅಪ್ಪಣ್ಣ ಮಾತನಾಡಿ ಬಿ.ಜೆ.ಪಿ ಪಕ್ಷ ನಮ್ಮ ಸಮಾಜಕ್ಕೆ ಅನೇಕ ಕೊಡುಗೆಗಳನ್ನು ನೀಡಿದೆ. ವಾಲ್ಮೀಕಿ ಗುರುಪೀಠ, ಜಿಲ್ಲಾ ನಾಯಕ ಸಂಘ, ನಾಯಕರ ಸರ್ಕಾರಿ ನೌಕರರ ಸಂಘ, ನಾಯಕರ ಯುವ ಸಂಘಟನೆಗಳ ಜೊತೆಗೆ ನಮ್ಮೆಲ್ಲರ ಹೋರಾಟದ ಪರವಾಗಿ ಮೈಸೂರು ವಿಭಾಗದ ಜ್ವಲಂತ ಸಮಸ್ಯೆಯಾಗಿದ್ದ ಪರಿವಾರವನ್ನು ಎಸ್.ಟಿ ಗೆ ಸೇರ್ಪಡೆ ಮಾಡಿದ್ದಾರೆ. ಇದ್ದಕ್ಕಾಗಿ ಯಡಿರೂರಪ್ಪ ರವರು ಅನಂತ್‌ಕುಮಾರ್ ರವರು ಪ್ರತಾಪ್ ಸಿಂಹ, ಸದಾನಂದ ಗೌಡರು ಹಾಗೂ ರಾಜ್ಯ ಸರ್ಕಾರಕ್ಕೆ ಧನ್ಯವಾದ ತಿಳಿಸುತ್ತೇನೆ. ಇದಲ್ಲದೆ ಮಹರ್ಷಿ ವಾಲ್ಮೀಕಿ ನಿಗಮ, ಪ್ರತ್ಯೇಕ ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆ ಸ್ಥಾಪನೆ ಶೇ.೭% ಮೀಸಲಾತಿ ಹೆಚ್ಚಳ, ಅಯೋಧ್ಯೆಯ ವಿಮಾನ ನಿಲ್ದಾಣಕ್ಕೆ ಶ್ರೀ ಮಹರ್ಷಿ ವಾಲ್ಮೀಕಿ ಹೆಸರು ಇಟ್ಟಿದ್ದಾರೆ ಆದ್ದರಿಂದ ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಯ ಬಿ.ಜೆ.ಪಿ ಮತ್ತು ಜೆ.ಡಿ.ಎಸ್. ಸಂಯುಕ್ತ ಅಭ್ಯರ್ಥಿಗಳ ಪರವಾಗಿ ಪಕ್ಷದ ಸೂಚನೆಯ ಮೇರೆಗೆ ಕೆಲಸ ಮಾಡುವುದರ ಜೊತೆಗೆ ಯದುವೀರ್ ರವರ ಗೆಲುವಿಗಾಗಿ ಶ್ರಮಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಚಾಮರಾಜ ನಗರ ಜಿ.ಪಂ ಮಾಜಿ ಅಧ್ಯಕ್ಷ ಎಸ್. ಮಹದೇವಯ್ಯ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಎಂ.ರಾಜೇoದ್ರ, ಚುನಾವಣಾ ಸಂಚಾಲಕ ಮೈ.ವಿ ರವಿಶಂಕರ್,  ಬಿಜೆಪಿ ಮೈಸೂರು ಗ್ರಾಮಾಂತರ ಜಿಲ್ಲಾಧ್ಯಕ್ಷ  ಅಧ್ಯಕ್ಷ ಎಲ್. ಆರ್ ಮಹದೇವಸ್ವಾಮಿ, ಉದ್ಯಮಿ ಶಬರೀಶ್, ಮಹೇಶ್, ವಸಂತ್ ಕುಮಾರ್, ಪ್ರಭಾಕರ್, ರಾಜು, ಸುರೇಶ್, ನಾಗೇಂದ್ರ ಹಾಗೂ ನಾಯಕ ಸಮಾಜದ ಮುಖಂಡರು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!