ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾನು ನಿಮಗೆ ವೋಟ್ ಹಾಕಿದಿನಿ, ನೀವು ಈ ಕೆಲಸ ಮಾಡಿಕೊಡಲೇಬೇಕು ಪ್ಲೀಸ್ ಎಂದು ವೋಟರ್ ಒಬ್ಬ ಶಾಸಕರ ಬಳಿ ಡಿಮ್ಯಾಂಡ್ ಇಟ್ಟಿದ್ದಾರೆ.
ನಾನು ನಿಮಗೆ ಮತ ಹಾಕಿದ್ದೇನೆ, ನೀವು ನನ್ನ ಮದುವೆ ಮಾಡಿಸಬೇಕು ಎನ್ನುವ ವ್ಯಕ್ತಿಯೊಬ್ಬರ ಮಾತು ಕೇಳಿ ಶಾಸಕರೊಬ್ಬರು ಬೆಚ್ಚಿಬಿದ್ದಿದ್ದಾರೆ. ಉತ್ತರ ಪ್ರದೇಶದ ಮಹೋಬಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಪೆಟ್ರೋಲ್ ಪಂಪ್ ಉದ್ಯೋಗಿಯೊಬ್ಬರು ಚರಖಾರಿ ಶಾಸಕ ಬ್ರಿಜ್ ಭೂಷಣ್ ರಜಪೂತ್ ಅವರ ಬಳಿ ತಮಗೆ ಮದುವೆ ಮಾಡಿಸುವಂತೆ ಮನವಿ ಮಾಡಿದ್ದಾರೆ.
ಶಾಸಕರು ತಮ್ಮ ಕಾರಿಗೆ ಪೆಟ್ರೋಲ್ ಹಾಕಿಸಲೆಂದು ಪೆಟ್ರೋಲ್ ಬಂಕ್ ಬಳಿ ಬಂದಾಗ ಅಲ್ಲಿನ ಸಿಬ್ಬಂದಿಯೊಬ್ಬರು ಶಾಸಕರ ಬಳಿ ಓಡಿ ಬಂದಿದ್ದರು. ಬಳಿಕ ನಾನು ನಿಮಗೆ ಮತ ಹಾಕಿದ್ದೇನೆ ಅದಕ್ಕೆ ಪ್ರತಿಯಾಗಿ ನೀವು ನನಗೆ ಮದುವೆ ಮಾಡಿಸಬೇಕು ಎನ್ನುವ ಬೇಡಿಕೆ ಮುಂದಿಟ್ಟರು.
ಅದಕ್ಕೆ ಶಾಂತವಾಗಿ ವರ್ತಿಸಿರುವ ಶಾಸಕರು ಹುಡುಗಿ ಹುಡುಕಿ ಮದುವೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಮೊದಲು ಪೆಟ್ರೋಲ್ ಬಂಕ್ ಉದ್ಯೋಗಿ ಶಾಸಕರ ಬಳಿ ಓಡಿ ಬಂದಾಗ ಏನೋ ದೂರು ನೀಡಲು ಬಂದಿರಬಹುದು ಎಂದು ತಿಳಿದಿದ್ದರು ಬಳಿಕ, ಅವರ ಮಾತು ಕೇಳಿ ದಿಗ್ಭ್ರಮೆಗೊಂಡರು.