ವೋಟ್ ಹಾಕಿಲ್ವಾ? ಕರೆಂಟ್ ಬಿಲ್ ಯಾಕ್ ಕಟ್ಬೇಕು? ಮಹಿಳೆಯರ ರಂಪಾಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂಗ್ರೆಸ್ ಸರ್ಕಾರಿ ಗ್ಯಾರೆಂಟಿ ಯೋಜನೆಗಳನ್ನು ಜಾರಿ ಮಾಡೋ ತನಕ ಲೈನ್ ಮೆನ್‌ಗಳಿಗೆ ನೆಮ್ಮದಿಯೇ ಇಲ್ಲದಂತಾಗಿದೆ.

ಯಾದಗಿರಿಯಲ್ಲಿ ಇಂಥದ್ದೇ ಘಟನೆ ನಡೆದಿದ್ದು, ಕರೆಂಟ್ ಬಿಲ್ ಕಟ್ಟದ ಮನೆಗಳ ಕನೆಕ್ಷನ್ ಕಿತ್ತ ಲೈನ್‌ಮೆನ್‌ಗಳನ್ನು ಮಹಿಳಾಮಣಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.

ಅಷ್ಟೇ ಅಲ್ಲದೆ ಮನೆಯಿಂದ ಕಿತ್ತು ತಂದ ವೈರ್‌ಗಳನ್ನು ಲೈನ್ ಮೆನ್ ವಾಹನದಿಂದ ಕಿತ್ತುಕೊಂಡಿದ್ದಾರೆ. ಯಾದಗಿರಿಯ ಅಬ್ಬೆತುಮಕೂರ ಗ್ರಾಮದಲ್ಲಿ 5-10 ಸಾವಿರ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ ಮನೆಗಳಿಗೆ ಲೈನ್‌ಮೆನ್ ತೆರಳಿ ಕನೆಕ್ಷನ್ ಕಿತ್ತುಹಾಕಿದ್ದಾರೆ.

ಮಹಿಳೆಯರ ರಂಪ ರಾಮಾಯಣಕ್ಕೆ ಸಿಬ್ಬಂದಿ ಹೈರಾಣಾಗಿದ್ದು, ಕರೆಂಟ್ ಬಿಲ್ ವಸೂಲಿಗೆ ಹೋಗೋಕೆ ಹಿಂದೆ ಮುಂದೆ ನೋಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!