ಇನ್ನೂ ಏನೇನ್‌ ನೋಡ್ಬೇಕು ಮತದಾರ! ನಕಲಿ ಶಾರುಖ್​ನ ಕರೆಸಿ ಚುನಾವಣಾ ಪ್ರಚಾರ ಮಾಡಿಸಿದ ಪ್ರಣಿತಿ ಶಿಂಧೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಲೋಕಸಭಾ ಚುನಾವಣೆಯ 2ನೇ ಹಂತದ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿದೆ. ಹೀಗಾಗಿ ಗುರುವಾರ ಹಲವು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಸೊಲ್ಲಾಪುರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಶಾಸಕಿ ಪ್ರಣಿತಿ ಶಿಂಧೆಕೂಡ ಶಕ್ತಿ ಪ್ರದರ್ಶನದಲ್ಲಿ ಭಾಗಿಯಾದರು. ಈ ವೇಳೆ ಡೂಪ್ಲಿಕೇಟ್​ ಶಾರುಖ್‌ ಖಾನ್‌ ನೋಡಿ ಎಲ್ಲರಿಗೂ ಅಚ್ಚರಿ ಆಯಿತು. ಶಾರುಖ್‌ ಖಾನ್‌ ಬಂದಿದ್ದಾರೆಂದು ಅಭಿಮಾನಿಗಳು ಮುಗಿಬಿದ್ದರು.

ಪ್ರಣಿತಿ ಶಿಂಧೆ ಅವರ ಪ್ರಚಾರದಲ್ಲಿ ಶಾರುಖ್ ಖಾನ್ ಅವರಂತೆ ಕಾಣುವ ವ್ಯಕ್ತಿಯೊಬ್ಬರು ಎಲ್ಲರ ಗಮನ ಸೆಳೆದರು. ಪ್ರಣಿತಿ ಶಿಂಧೆಯ ಪ್ರಚಾರಕ್ಕಾಗಿ ಶಾರುಖ್ ಸ್ವತಃ ರ‍್ಯಾಲಿಯಲ್ಲಿ ಕಾಣಿಸಿಕೊಂಡಿದ್ದಾರಾ ಎಂದು ಹಲವರು ಆಶ್ಚರ್ಯ ಪಡುತ್ತಿದ್ದರು. ಅವರ ಹಾವಭಾವ ಮತ್ತು ಲುಕ್​ ನೋಡಿದರೆ ಕಿಂಗ್ ಖಾನ್‌ ಅವರಂತೆಯೇ ಇತ್ತು. ಹಾಗಾಗಿ ಎಲ್ಲರೂ ಗೊಂದಲಕ್ಕೊಳಗಾದರು. ಆದರೆ ಇದು ಬರೀ ಪ್ರಚಾರದ ಗಿಮಿಕ್‌ ಎಂದು ಗೊತ್ತಾಗುತ್ತಿದ್ದಂತೆಯೇ ಅಭಿಮಾನಿಗಳು ಬೇಸರಗೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!