ಸೆ.5 ಕ್ಕೆ ಬ್ರಿಟನ್‌ ನೂತನ ಪ್ರಧಾನಿ ಘೋಷಣೆ; ರಿಷಿ ಸುನಕ್ ಗೆ ಒಲಿಯುತ್ತಾ ಪಟ್ಟ?

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಬ್ರಿಟನ್‌ ನೂತನ ಪ್ರಧಾನಿ ಹಾಗೂ ಟೋರಿ ಪಕ್ಷದ ಮುಖ್ಯಸ್ಥರನ್ನು ಆರಿಸಲು ಶುಕ್ರವಾರ ಸಂಜೆ ಮತದಾನ ಕೊನೆಗೊಂಡಿದೆ.
ಭಾರತೀಯ ಮೂಲದ ಮಾಜಿ ಚಾನ್ಸೆಲರ್ ರಿಷಿ ಸುನಕ್ ಹಾಗೂ ಮಾಜಿ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ನಡುವೆ ತಮ್ಮ ಆಯ್ಕೆಯನ್ನು ಟೋರಿ ಸದಸ್ಯರು ಈಗಾಗಲೇ ನೋಂದಾಯಿಸಿದ್ದಾರೆ. ಬ್ರಿಟನ್‌ ನೂತನ ಪ್ರಧಾನಿ ಯಾರು ಎಂಬ ವಿಚಾರ ಸೆ.5 ರಂದು ಸೆರವೇರಲಿರುವ ಮತ ಎಣಿಕೆ ಬಳಿಕ ಘೋಷಣೆಯಾಗಲಿದೆ.
ಅಂದಾಜು 1.60 ಟೋರಿ ಮತದಾರರ ಮತಗಳನ್ನು ಸೆಳೆಯಲು ಸುನಕ್ ಮತ್ತು ಟ್ರಸ್ ಕಳೆದ ಒಂದು ತಿಂಗಳಿನಿಂದ ಪ್ರಯತ್ನ ನಡೆಸುತ್ತಿದ್ದು, ಹಲವಾರು ಚುನಾವಣಾ ಪ್ರಕ್ರಿಯೆಗಳು ಹಾಗೂ ಹತ್ತಾರು ಪ್ರಶ್ನೋತ್ತರ ಕಾರ್ಯಕ್ರಮಗಳಲ್ಲಿ ಮುಖಾಮುಖಿಯಾಗಿದ್ದಾರೆ.
ಮತಪತ್ರಗಳನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗಿದ್ದು, ಸೋಮವಾರ ಸ್ಥಳೀಯ ಕಾಲಮಾನ ಮಧ್ಯಾಹ್ನ 12.30ಕ್ಕೆ ಫಲಿತಾಂಶವನ್ನು ಚುನಾವಣಾಧಿಕಾರಿ ಸರ್ ಗ್ರಹಾಂ ಬ್ರಾಡಿ ಘೋಷಿಸಲಿದ್ದಾರೆ ಎಂದು ಕನ್ಸರ್ವೇಟಿವ್ ಕ್ಯಾಂಪೇನ್ ಹೆಡ್ಕ್ವಾರ್ಟರ್ಸ್ (ಸಿಸಿಹೆಚ್‌ಕ್ಯೂ) ತಿಳಿಸಿದೆ.
ಬ್ರಿಟೀಷ್ ಭಾರತೀಯ ರಿಷಿ ಸನಾಕ್ ತಮ್ಮ ಪ್ರಚಾರದ ವೇಳೆ, ತಾವು ಬ್ರಿಟನ್‌ ಪ್ರಧಾನಿಯಾದರೆ ತಕ್ಷಣದ ಆದ್ಯತೆಯಾಗಿ ಗಗನಕ್ಕೇರುತ್ತಿರುವ ಹಣದುಬ್ಬರದ ಮೇಲೆ ಹಿಡಿತ ಸಾಧಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಘೋಷಿಸಿದರೆ, ಲಿಜ್ ಟ್ರಸ್ ತಾವು ಪ್ರಧಾನಿಯಾದ ಕಚೇರಿಗೆ ಕಾಲಿಟ್ಟ ಮೊದಲ ದಿನದಿಂದಲೇ ತೆರಿಗೆ ಕಡಿತ ಮಾಡುವ ಪ್ರತಿಜ್ಞೆ ಮಾಡಿದ್ದಾರೆ. ಒಟ್ಟಾರೆಯಾಗಿ, ಬ್ರಿಟಿಷ್ ಸಾರ್ವಜನಿಕರು ಎದುರಿಸುತ್ತಿರುವ ಜೀವನ ವೆಚ್ಚದ ಬಿಕ್ಕಟ್ಟನ್ನು ನಿಭಾಯಿಸಲು ಲಿಜ್‌ ಟ್ರಸ್‌ ಘೋಷಣೆ ಚರ್ಚೆಗಳಲ್ಲಿ ಪ್ರಾಬಲ್ಯ ಸಾಧಿಸಿದೆ. ಇಬ್ಬರೂ ಪ್ರಧಾನಿ ಅಭ್ಯರ್ಥಿಗಳು ಬುಧವಾರ ರಾತ್ರಿ ಲಂಡನ್‌ನಲ್ಲಿ ತಮ್ಮ ಅಂತಿಮ ಚರ್ಚಾ ಕಾರ್ಯಕ್ರಮದಲ್ಲಿ ತಮ್ಮ ಪ್ರತಿಜ್ಞೆಗಳನ್ನು ಪುನರುಚ್ಚರಿಸಿದ್ದಾರೆ.
ನಾನು ಪ್ರಧಾನಿ ಹುದ್ದೆಗೆ ನಡೆಸಿದ ಅಭಿಯಾನದ ಸಂದರ್ಭದಲ್ಲಿ ಜನರ ಹೃದಯದಲ್ಲಿ ನಂಬಿಕೆಯನ್ನು ಮರುಸ್ಥಾಪಿಸಿದ್ದೇನೆ ಎಂದು ಸುನಕ್ ಹೇಳಿದ್ದಾರೆ. ಟೋರಿ ಸಂಸದರು ಪ್ರಧಾನಿ ಹುದ್ದೆಗೆ ನಡೆದ ಸ್ಪರ್ಧೆಯಲ್ಲಿ ಫೈನಲಿಸ್ಟ್‌ಗಳನ್ನು ಆಯ್ಕೆ ಮಾಡಲು ಮತ ಚಲಾಯಿಸಿದಾಗ ಮೊದಲ ಸುತ್ತಿನ ಮತದಾನದಲ್ಲಿ ಸುನಾಕ್‌ ಮುಂಚೂಣಿ ಸ್ಥಾನ ಪಡೆದಿದ್ದರು. ಆದರೆ ಟೋರಿ ಸದಸ್ಯರ ಪೂರ್ವ-ಚುನಾವಣೆ ಸಮೀಕ್ಷೆಗಳಲ್ಲಿ ಅವರು ಲಿಜ್‌ ಟ್ರಸ್‌ ಗಿಂತ ಹಿಂದುಳಿದಿದ್ದಾರೆ.
ಆದಾಗ್ಯೂ ಸುನಕ್ ಅವರ ಬೆಂಬಲಿಗರು ಜೂನ್ 2016 ರಿಂದ ಬ್ರೆಕ್ಸಿಟ್ ಜನಾಭಿಪ್ರಾಯ ಸಂಗ್ರಹಣೆಯ ಫಲಿತಾಂಶದ ಪುನರಾವರ್ತನೆಗಾಗಿ ಆಶಿಸುತ್ತಿದ್ದಾರೆ. ಬ್ರಿಟನ್ ಯುರೋಪಿಯನ್ ಒಕ್ಕೂಟವನ್ನು (ಇಯು) ತೊರೆಯುವ ಪರವಾಗಿ ಮತ ಚಲಾಯಿಸಿದಾಗ ಸಮೀಕ್ಷೆಗಳಲ್ಲಿ ಈ ಬಗ್ಗೆ ಬ್ರಿಟನ್‌ ನ ಜನತೆ ಹೆಚ್ಚಿನ ಸಹಮತ ಹೊಂದಿಲ್ಲ ಎಂದು ಸಮೀಕ್ಷೆಗಳು ಹೇಳಿದ್ದವು. ಆದರೆ  2019 ರ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಸಮೀಕ್ಷೆಗಳಿಗೆ ತದ್ವಿರುದ್ಧವಾಗಿತ್ತು. ಬ್ರೆಕ್ಸಿಟ್‌ ನಾಯಕ ಬೋರಿಸ್ ಜಾನ್ಸನ್‌ ಬಹುಮತದೊಂದಿಗೆ ಅಧಿಕಾರಕ್ಕೆ ಏರಿದ್ದರು. ಬ್ರಿಟನ್ ಹೊಸ ಪ್ರಧಾನಿ ಬುಧವಾರ ಹೌಸ್ ಆಫ್ ಕಾಮನ್ಸ್‌ನಲ್ಲಿ ತಮ್ಮ ಹುದ್ದೆಯನ್ನು ಅಲಂಕರಿಸಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!