ಹೊಸದಿಗಂತ ಡಿಜಿಟಲ್ ಡೆಸ್ಕ್:
ಆರು ರಾಜ್ಯಗಳ 13 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಿಗದಿಪಡಿಸಲಾಗಿದ್ದು, ಮಾ.31ರಂದು ಮತದಾನ ನಡೆಯಲಿದೆ ಎಂದು ಭಾರತದ ಚುನಾವಣಾ ಆಯೋಗ ಘೋಷಿಸಿದೆ.
ಪಂಜಾಬ್ ನಲ್ಲಿ 6, ಕೇರಳ 3, ಅಸ್ಸಾಂ 2, ಹಿಮಾಚಲ ಪ್ರದೇಶ, ನಾಗಾಲ್ಯಾಂಡ್, ತ್ರಿಪುರ ರಾಜ್ಯಗಳಲ್ಲಿ ತಲಾ ಒಂದು ಸ್ಥಾನ ಭರ್ತಿ ಮಾಡಲು ಚುನಾವಣೆ ನಿಗದಿಪಡಿಸಲಾಗಿದೆ.
ರಾಜ್ಯಸಭಾ ಸದಸ್ಯರಾದ ಸುಖ್‌ದೇವ್ ಸಿಂಗ್, ಪ್ರತಾಪ್ ಸಿಂಗ್ ಬಜ್ವಾ, ಸ್ವೈತ್ ಮಲಿಕ್, ನರೇಶ್ ಗುಜ್ರಾಲ್, ಶ್ಯಾಮ್‌ಶೇಖರ್ ಸಿಂಗ್ ಡಲ್ಲೋ, ಎಂ.ವಿ.ಶ್ರೇಯಮ್ಸ್ ಕುಮಾರ್, ಎ.ಕೆ.ಆಂಟೊನಿ, ಕೆ.ಸೋಮಪ್ರಸಾದ್, ಕೆ.ರಾಣೇ ನರೇಶ್, ರಿಪುನ್ ಬೋರಾ, ಆನಂದ್ ಶರ್ಮಾ, ಕೆ.ಜಿ.ಕೆನ್ಯೆ, ಸ್ಮಿತ್ ಝರ್ನ ದಾಸ್ ಅವರ ಅವಧಿ ಏಪ್ರಿಲ್ ತಿಂಗಳಲ್ಲಿ ಮುಗಿಯಲಿದೆ.
ಮಾ.14ಕ್ಕೆ ಅಧಿಸೂಚನೆ ನಡೆಯಲಿದ್ದು, ಮಾ.21ಕ್ಕೆ ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಲಿದೆ.
ಮಾ.31ರಂದು ಬೆಳಗ್ಗೆ 9ರಿಂದ 4 ಗಂಟೆವರೆಗೆ ಚುನಾವಣೆ ನಡೆಯಲಿದೆ. ಅಂದೇ ಮತ ಎಣಿಕೆ ಕಾರ್ಯ ನಡೆಯಲಿದ್ದು, ಚುನಾವಣಾ ಫಲಿತಾಂಶ ಹೊರ ಬೀಳಲಿದೆ.