80 ವರ್ಷ ಮೀರಿದವರಿಗೆ ಮನೆಯಿಂದಲೇ ವೋಟಿಂಗ್: ಡಿ.ಕೆ. ಶಿವಕುಮಾರ್‌ ಆಕ್ಷೇಪ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಕರ್ನಾಟಕ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) 80 ವರ್ಷ ಮೀರಿದ ಹಿರಿಯ ನಾಗರಿಕರು ಮತ್ತು ವಿಕಲಚೇತನರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಚುನಾವಣಾ ಆಯೋಗವು ಒದಗಿಸಿರುವ ಕ್ರಮದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಅವಕಾಶ ಚುನಾವಣೆಯ ದುರ್ಬಳಕೆಗೆ ಹಾದಿಯಾಗಲಿದೆ . ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗಕ್ಕೂ ದೂರು ನೀಡುವುದಾಗಿ ಹೇಳಿದ್ದಾರೆ.

ಅಂಗವಿಕಲರು, ವೃದ್ದರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ನೀಡಿರುವುದು ಸರಿಯಲ್ಲ.. ಬಿಜೆಪಿ ಚುನಾವಣೆ ಆಯೋಗವನ್ನು ಬಳಸಿಕೊಂಡು ಚುನಾವಣೆ ದುರ್ಬಳಕೆಗೆ ಇದು ಸಹಕಾರಿಯಾಗಲಿದೆʼ ಎಂದು ಡಿಕೆ ಶಿವಕುಮಾರ್​ ಆರೋಪಿಸಿದ್ದಾರೆ.

ರಾಜ್ಯದಲ್ಲಿ 12 ಲಕ್ಷಕ್ಕೂ ಹೆಚ್ಚು ವೃದ್ಧ ಹಾಗೂ ಅಂಗವಿಕಲರ ಮತದಾರರಿದ್ದಾರೆ. ಇವರು ಮನೆಯಲ್ಲೇ ಮತದಾನ ಮಾಡಿದರೆ ಅಕ್ರಮ ನಡೆಯುತ್ತದೆ. ತಮಗೆ ಬೇಕಾದಂತೆ ಬಿಜೆಪಿ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತದೆ.ಈ ವಿಚಾರವಾಗಿ ಕೇಂದ್ರ ಚುನಾವಣಾ ಆಯೋಗಕ್ಕೆ ಆಕ್ಷೇಪ ಸಲ್ಲಿಸುವುದಾಗಿ ಡಿ.ಕೆ ಶಿವಕುಮಾರ್‌ ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!