Friday, June 2, 2023

Latest Posts

ವಿಧಾನಸಬೆ ಚುನಾವಣೆ ಘೋಷಣೆ ಬೆನ್ನಲ್ಲೇ 6 ಐಎಎಸ್ ಅಧಿಕಾರಿಗಳ ವರ್ಗಾವಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ವಿಧಾನಸಬೆ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಇತ್ತ 6 ಐಎಎಸ್ ಅಧಿಕಾರಿಗಳನ್ನು (IAS Officials) ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ.

ಶ್ರೀಕರ್ ಎಂಎಸ್ (ಡಿಪಿಎಆರ್ ಕಾರ್ಯದರ್ಶಿ), ಶೇಕ್ ತನ್ವೀರ್ ಆಸೀಫ್ (ಮಂಡ್ಯ ಜಿ.ಪಂ ಸಿಇಒ), ಲೋಕಂಡೆ ಸ್ನೇಹಲ್‌ ಸುಧಾಕರ್ (ಶಿವಮೊಗ್ಗ ಜಿ.ಪಂ ಸಿಇಒ), ರಂಗಪ್ಪ.ಎಸ್ (ಔಷಧ ಸರಬರಾಜು ನಿಗಮದ ಎಂಡಿ), ಗರಿಮಾ‌ ಪವಾರ್ (ಯಾದಗಿರಿ ಜಿ.ಪಂ ಸಿಇಒ), ಆಕೃತಿ ಬನ್ಸಾಲ್ (ಸಹಾಯಕ ಸ್ಥಾನೀಯ ಆಯುಕ್ತೆ, ಕರ್ನಾಟಕ ಭವನ) ಅವರನ್ನು ವರ್ಗಾವಣೆ ಮಾಡಲಾಗಿದೆ. ಆಯುಷ್ ಇಲಾಖೆ ಆಯುಕ್ತ ಜೆ. ಮಂಜುನಾಥ್‌ಗೆ ಹೆಚ್ಚುವರಿ ಯೋಜನಾ ನಿರ್ದೇಶಕ ಹುದ್ದೆ ಹೊಣೆಗಾರಿಕೆ ನೀಡಲಾಗಿದೆ.

ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಮೇ 10 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮೇ 13 ರಂದು ಮತ ಎಣಿಕೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದ್ದಾರೆ. ಇದರ ಬೆನ್ನಲ್ಲೇ ರಾಜ್ಯದಲ್ಲಿ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!