ಹುಬ್ಬಳ್ಳಿಯ ಮತಗಟ್ಟೆಯಲ್ಲಿ ಮತಯಂತ್ರದೋಷ: ಮತದಾನ ಸ್ಥಗಿತ

ದಿಗಂತ ವರದಿ ಹುಬ್ಬಳ್ಳಿ:

ಇಲ್ಲಿಯ ಅಮರಗೋಳ ಸರ್ಕಾರಿ ಮಾದರಿ ಶಾಲೆಯ ಬೂತ್ ಸಂಖ್ಯೆ113  ರಲ್ಲಿ ಮತಯಂತ್ರದಲ್ಲಿ(ಇವಿಎಂ) ತಾಂತ್ರಿ ದೋಷಗಳು ಕಾಣಿಸಿಕೊಂಡಿದ್ದು, ಮತದಾನ ಸ್ಥಗಿತವಾಗಿದೆ.

ಬೆಳಿಗ್ಗೆ 6 ಗಂಟೆಗೆ ಆರಂಭವಾಗಬೇಕಿದ್ದ ಮತದಾನ ಪ್ರಕ್ರಿಯೆ ಸ್ವಲ್ಪ ತಡವಾಗಿದೆ. ಹಿರಿಯ ಅಧಿಕಾರಿಗಳು ಮತಯಂತ್ರವನ್ನು ಪರಿಶೀಲಿಸಿದರು. ಮತದಾನಕ್ಕೆ ಆಗಮಿಸಿದ ಜನತೆ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯಗಳು ಕಂಡು ಬಂದಿದೆ. ಇನ್ನೂ ಉಳಿದ ಕಡೆ ಮತದಾನ ಸುಲಲಿತವಾಗಿ ನಡೆಯುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!