ವಾಟ್ಸಾಪ್‌ನಲ್ಲಿ ವೋಟ್‌ ಮಾಡುವ ಫೋಟೊ ಸ್ಟೇಟಸ್‌: ಪಾಲಿಕೆ ಸದಸ್ಯನ ಮೇಲೆ ಆರೋಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಬಳ್ಳಾರಿಯಲ್ಲಿ ಮಹಾನಗರ ಪಾಲಿಕೆ ಸದಸ್ಯ ಕೋನಂಕಿ ತಿಲಕ್ ರಿಂದ ಗೌಪ್ಯ ಮತದಾನ ನಿಯಮ ಉಲ್ಲಂಘನೆ ಆರೋಪ ಕೇಳಿಬಂದಿದೆ.

ಪಾಲಿಕೆ ಸದಸ್ಯನೋರ್ವ ಬಿಜೆಪಿ ಅಭ್ಯರ್ಥಿಗೆ ವೋಟ್ ಮಾಡಿ ವಾಟ್ಸಪ್ ಸ್ಟೇಟಸ್ ಹಾಕಿದ್ದಾರೆ. ಬಳ್ಳಾರಿಯ 10 ನೇ ವಾರ್ಡ್ ನ ಪಾಲಿಕೆ ಸದಸ್ಯ ಕೋನಂಕಿ ತಿಲಕ್ ವೋಟ್ ಮಾಡಿ ಪೋಟೋ ತೆಗೆದುಕೊಂಡು ವಾಟ್ಸಪ್ ಸ್ಟೇಟಸ್ ಹಾಕಿದ್ದಾರೆ ಎನ್ನಲಾಗುತ್ತಿದೆ. ಇವಿಎಂ ಮಿಷನ್ ನಲ್ಲಿರುವ ಬಿಜೆಪಿಯ ಕಮದ ಚಿನ್ನೆ ಬಟನ್ ಮೇಲೆ ಬೆರಳಿಟ್ಟು ಪೋಟೋ ಕ್ಲಿಕ್ಕಿಸಿದ್ದಾರೆ.

ಬಿಜೆಪಿ ಅಭ್ಯರ್ಥಿಯೊಬ್ಬರಿಗೆ ಮತ ಚಲಾಯಿಸಿದೆ ಎಂದು ಪೋಟೋ ಕ್ಯಾಪ್ಷನ್ ಕೊಟ್ಟು ವಾಟ್ಯಾಪ್​ ಸ್ಟೇಟಸ್​ ಹಾಕಿದ್ದಾರೆ. ಜನಪ್ರತಿನಿಧಿಯಿಂದಲೇ ಈ ನಿಯಮ ಉಲ್ಲಂಘನೆಯಾಗಿದೆ ಎಂಬ ಮಾತು ಕೇಳಿಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!