Saturday, March 25, 2023

Latest Posts

ದೆಹಲಿ ಪಾಲಿಕೆ ಚುನಾವಣೆ: ಮೇಯರ್ ಆಯ್ಕೆಗಾಗಿ ನಡೆಯುತ್ತಿದೆ ಬಿರುಸಿನ ಮತದಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆಡಳಿತಾರೂಢ ಎಎಪಿ ಮತ್ತು ಬಿಜೆಪಿ ಕೌನ್ಸಿಲರ್‌ಗಳ ನಡುವಿನ ಜಗಳದ ನಡುವೆ ಅಂತಿಮವಾಗಿ ಇಂದು ದೆಹಲಿ ಮೇಯರ್‌ ಆಯ್ಕೆಗೆ ಬಿರುಸಿನ ಮತದಾನ ನಡೆಯುತ್ತಿದೆ. ಕಳೆದ ಎರಡು ತಿಂಗಳುಗಳಲ್ಲಿ ಮೂರು ಬಾರಿ ಮೇಯರ್‌ ಆಯ್ಕೆಗೆ ನಡೆದ ವಿಫಲ ಪ್ರಯತ್ನಗಳ ನಂತರ ರಾಷ್ಟ್ರೀಯ ರಾಜಧಾನಿ ಹೊಸ ನಾಗರಿಕ ಮುಖ್ಯಸ್ಥರ ನೇಮಕಕ್ಕೆ ಅಂತಿಮವಾಗಿ ಚುನವಾಣೆ ನಡೆಯುತ್ತಿದೆ.

ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ನಾಮನಿರ್ದೇಶನಗೊಂಡ ಸದಸ್ಯರಿಗೆ ಮತದಾನ ಹಕ್ಕು ಇಲ್ಲ ಎಂದು ತೀರ್ಪು ನೀಡಿದ ಬೆನ್ನಲ್ಲೇ, ಇದೀಗ ಫೆಬ್ರವರಿ 22, ಬುಧವಾರ ದಿಲ್ಲಿ ಮಹಾನಗರ ಪಾಲಿಕೆಯ ಮೇಯರ್ ಎಲೆಕ್ಷನ್ ನಡೆಯುತ್ತಿದೆ.

ಮೇಯರ್ ಚುನಾವಣೆಗೆ ಒಟ್ಟು 274 ಸಿಂಧುವಾದ ಮತಗಳಿವೆ. ಆದರೆ, ಗ್ರ್ಯಾಂಡ್ ಓಲ್ಡ್ ಪಕ್ಷವು ಮೇಯರ್ ಚುನಾವಣೆಯನ್ನು ಬಹಿಷ್ಕರಿಸಿದ್ದರಿಂದ 9 ಕಾಂಗ್ರೆಸ್ ಕೌನ್ಸಿಲರ್‌ಗಳು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿಲ್ಲ. ಹೀಗಾಗಿ ಬುಧವಾರದ ಚುನಾವಣೆಯಲ್ಲಿ ಒಟ್ಟು 265 ಮತಗಳು ಚಲಾವಣೆಯಾಗುವ ನಿರೀಕ್ಷೆಯಿದೆ. ಇದರಲ್ಲಿ ಮೇಯರ್ ಅಭ್ಯರ್ಥಿ ಗೆಲ್ಲಲು 134 ಮತಗಳ ಅಗತ್ಯವಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!