Saturday, April 1, 2023

Latest Posts

ಆರತಕ್ಷತೆಗೂ ಮುನ್ನ ಹೆಣವಾದ ವಧು-ವರ, ಮೈಮೇಲೆ ಗಾಯಗಳಾಗಿದ್ದ ಸ್ಥಿತಿಯಲ್ಲಿ ಮೃತದೇಹ ಪತ್ತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಲ್ಲಿ ಮದುವೆಯ ಆರತಕ್ಷತೆಗೂ ಮುನ್ನ ವಧು-ವರ ಹೆಣವಾಗಿ ಪತ್ತೆಯಾಗಿದ್ದಾರೆ.

ಇಬ್ಬರ ದೇಹದ ಮೇಲೂ ಗಾಯಗಳಾಗಿದ್ದು, ಮನೆಯವರು ಮೃತದೇಹಗಳನ್ನು ನೋಡಿ ಬೆಚ್ಚಿಬಿದ್ದಿದ್ದಾರೆ. ಅಸ್ಲಾಂ ಮತ್ತು ಕಹ್ಕಶಾ ಬಾನೋ ಭಾನುವಾರ ಮದುವೆಯಾಗಿದ್ದರು. ಮಂಗಳವಾರ ರಾತ್ರಿ ಅವರ ಆರತಕ್ಷತೆಗೆ ತಯಾರಿ ನಡೆದಿತ್ತು. ಆರತಕ್ಷತೆಗೆ ರೆಡಿಯಾಗುತ್ತಿದ್ದ ವೇಳೆ ರೂಂನಿಂದ ಕಿರುಚಾಟದ ಸದ್ದು ಕೇಳಿದೆ, ವಧುವಿನ ತಾಯಿ ರೂಂ ಬಾಗಿಲು ತೆಗೆದು ನೋಡಿದ್ದಾರೆ.

ವಧು-ವರ ಇಬ್ಬರೂ ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ. ವಧು ಹಾಗೂ ವರದ ನಡುವೆ ವಾಗ್ವಾದ ನಡೆದಿದ್ದು, ತಾರಕಕ್ಕೇರಿದ ಜಗಳದಿಂದ ಚಾಕುವಿನಿಂದ ಪರಸ್ಪರ ಇರಿದುಕೊಂಡಿದ್ದಾರಾ ಅಥವಾ ಪತ್ನಿಯನ್ನು ಇರಿದು ವರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನಾ ತಿಳಿದುಬಂದಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!