April 16, 2026
Thursday, April 16, 2026
spot_img

VTU Results Out: ನಿಮ್ಮ ಯುಎಸ್ಎನ್ ನಂಬರ್ ರೆಡಿ ಇಟ್ಕೊಳ್ಳಿ, ರಿಸಲ್ಟ್ ಬಂದಿದೆ!

ಹೊಸದಿಗಂತ ಬೆಳಗಾವಿ:

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು (VTU) ಡಿಸೆಂಬರ್ 2025 ಮತ್ತು ಜನವರಿ 2026ರಲ್ಲಿ ನಡೆಸಿದ್ದ ವಿವಿಧ ಸ್ನಾತಕ (UG) ಮತ್ತು ಸ್ನಾತಕೋತ್ತರ (PG) ಪದವಿ ಸೆಮಿಸ್ಟರ್ ಪರೀಕ್ಷೆಗಳ ಫಲಿತಾಂಶವನ್ನು ಮಾರ್ಚ್ 3ರಂದು ಅಧಿಕೃತವಾಗಿ ಪ್ರಕಟಿಸಿದೆ.

ರಾಜ್ಯದ ಎಲ್ಲಾ ಸಂಯೋಜಿತ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್ ಮೂಲಕ ತಮ್ಮ ಅಂಕಗಳನ್ನು ಪರಿಶೀಲಿಸಬಹುದು.

ವೆಬ್‌ಸೈಟ್: https://results.vtu.ac.in

ನಿಮ್ಮ ಯುಎಸ್ಎನ್ (USN) ಸಂಖ್ಯೆಯನ್ನು ನಮೂದಿಸಿ ಲಾಗಿನ್ ಆಗುವ ಮೂಲಕ ವಿಷಯವಾರು ಅಂಕಗಳು, ಗ್ರೇಡ್ ಮತ್ತು ಒಟ್ಟು ಫಲಿತಾಂಶವನ್ನು ಪಡೆಯಬಹುದು. ಭವಿಷ್ಯದ ಬಳಕೆಗಾಗಿ ಫಲಿತಾಂಶದ ಪ್ರಿಂಟ್ ಔಟ್ ತೆಗೆದುಕೊಳ್ಳಲು ಸೂಚಿಸಲಾಗಿದೆ.

ಒಂದೇ ಸಮಯದಲ್ಲಿ ಸಾವಿರಾರು ವಿದ್ಯಾರ್ಥಿಗಳು ವೆಬ್‌ಸೈಟ್‌ಗೆ ಭೇಟಿ ನೀಡುವುದರಿಂದ ಸರ್ವರ್ ನಿಧಾನವಾಗುವ ಸಾಧ್ಯತೆಯಿದೆ. ಒಂದು ವೇಳೆ ತಾಂತ್ರಿಕ ತೊಂದರೆ ಎದುರಾದರೆ ವಿದ್ಯಾರ್ಥಿಗಳು ಆತಂಕಕ್ಕೊಳಗಾಗದೆ, ಸ್ವಲ್ಪ ಸಮಯದ ನಂತರ ಪುನಃ ಪ್ರಯತ್ನಿಸಬೇಕೆಂದು ವಿವಿ ತಿಳಿಸಿದೆ.

ತಮ್ಮ ಅಂಕಗಳ ಬಗ್ಗೆ ತೃಪ್ತಿ ಇಲ್ಲದ ವಿದ್ಯಾರ್ಥಿಗಳಿಗೆ ಮರುಮೌಲ್ಯಮಾಪನ ಮತ್ತು ಉತ್ತರ ಪತ್ರಿಕೆಯ ಪ್ರತಿಲಿಪಿ ಪಡೆಯಲು ಅವಕಾಶ ನೀಡಲಾಗುವುದು.

ಇದಕ್ಕೆ ಸಂಬಂಧಿಸಿದ ಅಧಿಸೂಚನೆ ಶೀಘ್ರದಲ್ಲೇ ವೆಬ್‌ಸೈಟ್‌ನಲ್ಲಿ ಪ್ರಕಟವಾಗಲಿದೆ. ವಿದ್ಯಾರ್ಥಿಗಳು ತಮ್ಮ ಕಾಲೇಜುಗಳ ಮೂಲಕವೂ ಹೆಚ್ಚಿನ ಮಾಹಿತಿ ಪಡೆದು, ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !