ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಂದ್ರಯಾನ- 3 (Chandrayaan-3) ಲ್ಯಾಂಡ್ ಆಗಲು ಇಡೀ ದೇಶವೇ ಕಾತರದಿಂದ ಎದುರು ನೋಡುತ್ತಿದ್ದಾರೆ.
ಇದೀಗ ಎಲ್ಲಾ ಭಾರತೀಯರಿಗೆ ಇದು ಹೆಮ್ಮೆಯ ಕ್ಷಣ ಎಂದು ಬಾಲಿವುಡ್ ನಟಿ ಕರೀನಾ ಕಪೂರ್ (Kareena Kapoor) ಮಾತನಾಡಿದ್ದಾರೆ.
ಇಸ್ರೋ ಚಂದ್ರನ ಮೇಲೆ ಯಶಸ್ವಿ ಸಾಫ್ಟ್ ಲ್ಯಾಂಡಿಂಗ್ ಮಾಡಲು ಸಿದ್ಧತೆ ನಡೆಯುತ್ತಿದೆ. ಸಾಮಾನ್ಯರಿಂದ ಹಿಡಿದು ಅನೇಕ ಸಿನಿ ತಾರೆಯರು ಕೂಡ ಇಸ್ರೋ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ.
ಚಂದ್ರಯಾನ-3 ಚಂದ್ರನ ಮೇಲೆ ಇಳಿಯುವುದನ್ನು ನೋಡಲು ಕಾಯುತ್ತಿದ್ದೇನೆ. ಎಲ್ಲಾ ಭಾರತೀಯರಿಗೆ ಇದು ಹೆಮ್ಮೆಯ ಕ್ಷಣವಾಗಿದೆ. ನಾನು ಮಕ್ಕಳ ಜೊತೆ ಕುಳಿತು ನೋಡುವೆ ಎಂದು ಕರೀನಾ ಮಾತನಾಡಿದ್ದಾರೆ.