ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಜನತೆಗೆ ಮತ್ತೊಂದು ದರ ಏರಿಕೆ ಬಿಸಿ ಕಾಡುತ್ತಿದೆ. ಏಪ್ರಿಲ್ ತಿಂಗಳಿನಿಂದ ಕರ್ನಾಟಕದಲ್ಲಿ ಹೊಸ ವಾಹನಗಳ ಬೆಲೆ ದುಬಾರಿಯಾಗುತ್ತಿದೆ.
ರಾಜ್ಯ ಸರ್ಕಾರ ಎಪ್ರಿಲ್ ತಿಂಗಳಿನಿಂದ ಹೆಚ್ಚುವರಿ ಸೆಸ್ ಹಾಕುತ್ತಿದೆ. ಇದರ ಜೊತೆಗೆ ಬಿಡಿ ಭಾಗ, ಉಕ್ಕುಗಳ ಆಮದು ದರ ಕೂಡ ಏಪ್ರಿಲ್‌ನಿಂದ ಏರಿಕೆಯಾಗುತ್ತಿದ್ದು, ಪರಿಣಾಮ ವಾಹನಗಳ ಬೆಲೆ ದುಬಾರಿಯಾಗುತ್ತಿದೆ.
ಪ್ರತಿ ವಾಹನದ ಮೇಲೆ ಶೇಕಡಾ 3 ರಿಂದ 4 ರಷ್ಟು ಬೆಲೆ ಏರಿಕೆಯಾಗುತ್ತಿದ್ದು, ಮುಂದಿನ ತಿಂಗಳಿನಿಂದ ರಾಜ್ಯದಲ್ಲಿ ವಾಹನ ಖರೀದಿ ಸವಾಲಾಗಲಿದೆ. ದ್ವಿಚಕ್ರವಾಹನಗಳ ಬೆಲೆ 2,000 ರೂಪಾಯಿಯಿಂದ 3000 ರೂಪಾಯಿ ವರೆಗೆ ಏರಿಕೆಯಾಗಲಿದೆ. ಇನ್ನು ಆಟೋ ರಿಕ್ಷಾ ಬೆಲೆ ಮೇಲೆ 5,000 ರೂಪಾಯಿ ಏರಿಕೆಯಾಗುವ ಸಾಧ್ಯತೆ ಇದೆ. ಕಾರುಗಳ ಬೆಲೆಯಲ್ಲಿ ಶೇಕಡಾ 2 ರಿಂದ 3 ರಷ್ಟು ದರ ಏರಿಕೆಯಾಗಲಿದೆ.