FASHION | ಇನ್ನೂ ಚೆನ್ನಾಗಿ ಡ್ರೆಸ್ ಮಾಡ್ಕೋಬೇಕಾ? ನಿಮಗಾಗಿ ಇಲ್ಲಿದೆ ಫ್ಯಾಷನ್ ಟಿಪ್ಸ್

ಯಾವುದೇ ಫಂಕ್ಷನ್‌ಗೆ ಹೋದರೂ ನಾನು ಇನ್ನೂ ಚೆನ್ನಾಗಿ ರೆಡಿಯಾಗ್ಬೇಕಿತ್ತು, ಇನ್ನೂ ಒಳ್ಳೆಯ ಬಟ್ಟೆ ಖರೀದಿ ಮಾಡ್ಬೇಕು, ಫ್ಯಾಷನ್ ಸೆನ್ಸ್ ಚೆನ್ನಾಗಿರಬೇಕು ಎಂದು ಅನಿಸುತ್ತದಾ? ಹಾಗಿದ್ರೆ ನಿಮ್ಮ ಫ್ಯಾಷನ್ ಸೆನ್ಸ್ ಇಂಪ್ರೂವ್ ಮಾಡೋಣ? ಹೇಗೆ ನೋಡಿ..

  • ಈಗ ಇರುವ ನಿಮ್ಮ ಕಬೋರ್ಡ್‌ನ್ನು ಒಮ್ಮೆ ನೋಡಿ, ಅಂಗಡಿಗೆ ಹೋಗಿ ಬಟ್ಟೆ ಖರೀದಿ ಮಾಡೋದೆ ಆಗಿದ್ದರೆ ನಿಮ್ಮ ಬಟ್ಟೆಗಳನ್ನು ತೆಗೆದುಕೊಳ್ಳುತ್ತಿದ್ರಾ?
  • ಪ್ರತಿದಿನ ಹಾಕುವ ಬಟ್ಟೆಗಳನ್ನು ಹ್ಯಾಂಗರ್ ಬಳಸಿ ನೇತುಹಾಕಿ, ಯಾವ ಬಟ್ಟೆ ಎಂದು ಆರಿಸೋಕೆ ಸುಲಭ.
  • ರಿಟರ್ನ್ ಇಲ್ಲದ ಬಟ್ಟೆಗಳನ್ನು ಖರೀದಿ ಮಾಡಬೇಡಿ, ಹಾಕಿ ನೋಡಿ ಬೇಡ ಎಂದರೆ ಕೊಡುವಂತೆ ಇರಬೇಕು.
  • ಬಟ್ಟೆ ಲೂಸ್ ಇದೆ, ಟೈಟ್ ಇದೆ ಎನ್ನೋದಾದ್ರೆ ಅಂಥವುಗಳನ್ನು ಎತ್ತಿಟ್ಟುಬಿಡಿ
  • ನಿಮ್ಮ ಬಾಡಿ ಟೈಪ್ ಹೇಗಿದೆ? ಅದಕ್ಕೆ ತಕ್ಕಂಥ ಬಟ್ಟೆ ಹಾಕಿ, ತೆಳ್ಳಗಿದ್ದೇನೆ ಎಂದು ಲೂಸಾದ ಬಟ್ಟೆ, ದಪ್ಪ ಇದ್ದೇನೆ ಎಂದು ಟೈಟ್ ಆದ ಬಟ್ಟೆ ಹಾಕಬೇಕಿಲ್ಲ.
  • ನಿಮ್ಮ ಕಬೋರ್ಡ್‌ನಲ್ಲಿ ಏನೆಲ್ಲಾ ಇದೆ ಅದೆಲ್ಲವೂ ಕಾಣುವಂತಿರಲಿ, ಕಾಣದೇ ಹೋದರೆ ಬಳಸುವುದೇ ಇಲ್ಲ.
  • ಫ್ಯಾಷನ್ ಪ್ರೋಗ್ರಾಮ್‌ಗಳು, ವಿಡಿಯೋಗಳಿಂದ ಬಟ್ಟೆಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಿ. ನಿಮ್ಮ ಇಷ್ಟದ ಸೆಲೆಬ್ರಿಟಿಗಳನ್ನು ಫಾಲೋ ಮಾಡಿ ಅವರ ಸ್ಟೈಲ್‌ನ್ನು ಗಮನಿಸಿ, ಫ್ಯಾಷನ್ ಮ್ಯಾಗಝೀನ್‌ಗಳನ್ನು ಓದಿ

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!