ಚಂದ್ರಯಾನ-3 ಮಿಷನ್‌ ಯಶಸ್ವಿಗಾಗಿ ಕಾಯುತ್ತಿರುವ ಸೆಲೆಬ್ರಿಟಿಗಳು, ಟ್ವಿಟ್ಟರ್‌ ಮೂಲಕ ಪ್ರಾರ್ಥನೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತದ ಮಹತ್ವಾಕಾಂಕ್ಷೆಯ ಮಿಷನ್ ಚಂದ್ರಯಾನ-3 ವಿಕ್ರಮ್ ರೋವರ್ ಇಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿದೆ. ಚಂದ್ರಯಾನ 3 ಯಶಸ್ವಿಯಾಗಿ ಲ್ಯಾಂಡಿಂಗ್ ಆಗಲಿ ಎಂದು ದೇಶಾದ್ಯಂತ ಪ್ರಾರ್ಥನೆಗಳು ನಡೆಯುತ್ತಿವೆ. ಇದರಿಂದ ಸಿನಿಮಾ ರಂಗ ಕೂಡ ಹೊರತಾಗಿಲ್ಲ. ನಟ-ನಟಿಯರು ಚಂದ್ರಯಾನ ಯಶಸ್ವಿಯಾಗಲೆಂದು ಪ್ರಾರ್ಥಿಸಿದ್ದಾರೆ.

ಕಾಂತಾರ ಚಿತ್ರದ ಮೂಲಕ ದೇಶಾದ್ಯಂತ ಹೆಸರು ಮಾಡಿರುವ ಸ್ಯಾಂಡಲ್‌ವುಡ್‌ ನಟ ರಿಷಬ್ ಶೆಟ್ಟಿ ಕೂಡ ಟ್ವಿಟ್ಟರ್ ನಲ್ಲಿ ಚಂದ್ರಯಾನ 3ಗ ಯಶಸ್ವಿಯಾಗಲೆಂದು ಹರಸಿದ್ದಾರೆ. ಚಂದ್ರಯಾನ -3ರ ಇಸ್ರೋ ಪೋಸ್ಟ್‌ ಮಾಡಿದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಭಾರತದ ಇತಿಹಾಸದಲ್ಲಿ ಇದೊಂದು ಮೈಲಿಗಲ್ಲು ಎಂದ ಅವರು, ಇದನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿರುವುದು ಅತ್ಯಂತ ರೋಮಾಂಚನಕಾರಿಯಾಗಿದೆ ಎಂದರು. ಚಂದ್ರಯಾನ 3 ಯಶಸ್ವಿಯಾಗಲಿ ಎಂದು ಬಯಸುವುದಾಗಿ ರಿಷಬ್ ಟ್ವೀಟ್‌ ಮಾಡಿದ್ದಾರೆ.

ಚಂದ್ರಯಾನ 3 ಖಂಡಿತವಾಗಿಯೂ ಯಶಸ್ವಿಯಾಗಲಿದೆ ಎಂದು ಹೀರೋ ಮಾಧವನ್ ಟ್ವೀಟ್ ಮಾಡಿದ್ದು, ತಮ್ಮ ಮಾತುಗಳನ್ನು ಬರೆದಿಟ್ಟುಕೊಳ್ಳಿ. ಇಸ್ರೋಗೆ ಮುಂಚಿತವಾಗಿ ಅಭಿನಂದನೆ ಸಲ್ಲಿಸುತ್ತಿದ್ದೇನೆ ಎಂದು ಹೇಳಿದರು. ಮಾಧವನ್ ಅವರು ನಂಬಿನಾರಾಯಣ್ ಅವರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಿದರು. ನಂಬಿನಾರಾಯಣ ಅವರ ಜೀವನ ಚರಿತ್ರೆ ಆಧಾರಿತ ರಾಕೆಟ್ರಿ ಚಿತ್ರದಲ್ಲಿ ಮಾಧವನ್ ನಟಿಸಿದ್ದರು.

ನಾಯಕಿ ಲಾವಣ್ಯ ತ್ರಿಪಾಠಿ ಕೂಡ ಚಂದ್ರಯಾನ 3 ಬಗ್ಗೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಇದು ಅತ್ಯಂತ ಹೆಮ್ಮೆಯ ಕ್ಷಣ ಎಂದ ಅವರು ಚಂದ್ರಯಾನ 3 ಗೆ ಸಂಬಂಧಿಸಿದ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!