September 27, 2026
Sunday, September 27, 2026
spot_img

ಪ್ರೋಟೀನ್‌, ಫೈಬರ್‌ ಒಂದೇ ಡಿಶ್‌ನಲ್ಲಿ ಸಿಗ್ಬೇಕಾ? ಇಂದೇ ಬೆಂಡೇಕಾಯಿ ಮೊಟ್ಟೆ ಪಲ್ಯ ಟ್ರೈ ಮಾಡಿ ನೋಡಿ

ಸಾಮಾಗ್ರಿಗಳು
ಎಣ್ಣೆ
ಸಾಸಿವೆ
ಜೀರಿಗೆ
ಕರಿಬೇವು
ಈರುಳ್ಳಿ
ಹಸಿಮೆಣಸು
ಟೊಮ್ಯಾಟೊ
ಬೆಂಡೇಕಾಯಿ
ಖಾರದಪುಡಿ
ಸಾಂಬಾರ್‌ ಪುಡಿ
ಉಪ್ಪು
ಅರಿಶಿಣ
ಮೊಟ್ಟೆ
ಕೊತ್ತಂಬರಿ ಸೊಪ್ಪು
ಮೊಸರು

ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಕರಿಬೇವು ಹಾಕಿ
ಆನಂತರ ಇದಕ್ಕೆ ಹಸಿಮೆಣಸಿನ ಕಾಯಿ ಹಾಗೂ ಈರುಳ್ಳಿ ಹಾಕಿ ಚೆನ್ನಾಗಿ ಬಾಡಿಸಿ
ನಂತರ ಟೊಮ್ಯಾಟೊ ಹಾಕಿ ಚೆನ್ನಾಗಿ ಬಾಡಿಸಿ
ಆಮೇಲೆ ಬೆಂಡೇಕಾಯಿ, ಉಪ್ಪು, ಅರಿಶಿಣ ಹಾಗೂ ಮೊಸರನ್ನು ಹಾಕಿ ಲೋಳೆ ಹೋಗುವವರೆಗೂ ಮಿಕ್ಸ್‌ ಮಾಡಿ
ನಂತರ ಖಾರದಪುಡಿ, ಸಾಂಬಾರ್‌ ಪುಡಿ ಹಾಕಿ
ಪಲ್ಯ ರೆಡಿಯಾದ ನಂತರ ಇದಕ್ಕೆ ಮೊಟ್ಟೆ ಹಾಕಿ, ಉಪ್ಪು ಹಾಕಿ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿದ್ರೆ ಪಲ್ಯ ರೆಡಿ

Must Read