ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಜೀವನದ ಕುರಿತಾದ 3 ತಾಸಿನ ಪಾಡ್‌ಕಾಸ್ಟ್ ಇಂದು (ಭಾನುವಾರ) ಸಂಜೆ 5.30ಕ್ಕೆ ಪ್ರಸಾರವಾಗಲಿದೆ.
ಕೃತಕ ಬುದ್ಧಿಮತ್ತೆ ಸಂಶೋಧಕ ಹಾಗೂ ಖ್ಯಾತ ಪಾಡ್‌ಕಾಸ್ಟರ್ ಲೆಕ್ಸ್ ಫ್ರಿಡ್‌ಮನ್ ಮೋದಿ ಸಂದರ್ಶನ ನಡೆಸಿದ್ದಾರೆ.
ಈ ಬಗ್ಗೆಎಕ್ಸ್ ನಲ್ಲಿ ಟ್ವೀಟ್ ಮಾಡಿದ ಮೋದಿ, ಈ ಪಾಡ್‌ಕಾಸ್ಟ್ ಫ್ರಿಡ್‌ಮನ್ ಅವರೊಂದಿಗಿನ ಆಕರ್ಷಕ ಸಂಭಾಷಣೆಯಾಗಿತ್ತು, ನನ್ನ ಬಾಲ್ಯ, ಹಿಮಾಲಯದಲ್ಲಿ ನಾನು ಕಳೆದ ಸಮಯ ಮತ್ತು ಸಾರ್ವಜನಿಕ ಜೀವನದ ಪ್ರಯಾಣವನ್ನು ನೆನಪಿಸಿಕೊಳ್ಳುವುದು ಸೇರಿದಂತೆ ವೈವಿಧ್ಯಮಯ ವಿಷಯಗಳನ್ನು ಒಳಗೊಂಡಿದೆ. ಟ್ಯೂನ್ ಮಾಡಿ ಮತ್ತು ಈ ಸಂವಾದದ ಭಾಗವಾಗಿರಿ! ಎಂದು ಪೋಸ್ಟ್ ಮಾಡಿದ್ದಾರೆ.
ಲೆಕ್ಸ್ ಫ್ರಿಡ್‌ಮನ್ ಈ ಹಿಂದೆ ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್, ಮಾರ್ಕ್ ಜುಕರ್‌ಬರ್ಗ್, ಜೆಫ್ ಬೆಜೋಸ್ ಮತ್ತು ವೊಲೊಡಿಮಿರ್ ಜೆಲೆನ್ಸ್ಕಿ ಸೇರಿ ಉನ್ನತ ಮತ್ತು ಪ್ರಭಾವಿ ವ್ಯಕ್ತಿಗಳೊಂದಿಗೆ ಪಾಡ್‌ಕಾಸ್ಟ್ ನಡೆಸಿದ್ದಾರೆ.