July 13, 2026
Monday, July 13, 2026
spot_img

ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಬೇಕಾ? ಕೆಎಸ್‌ಟಿಡಿಸಿ ಕಡೆಯಿಂದ ಭರ್ಜರಿ ಆಫರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಬೇಕು ಎಂದುಕೊಂಡವರಿಗಾಗಿ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನೂತ ಟ್ರಿಪ್‌ಪ್ಲಾನ್‌ ಒಂದನ್ನು ಪ್ರಕಟಿಸಿದೆ.

ಸಿಲಿಕಾನ್ ಸಿಟಿಯಿಂದ ಕರಾವಳಿಯ ಅತ್ಯಂತ ಪವಿತ್ರ ಕ್ಷೇತ್ರಗಳಾದ ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳಿಗೆ 2 ದಿನಗಳ ಆಕರ್ಷಕ ‘ಪ್ರೀಮಿಯಂ ಪ್ರವಾಸ ಪ್ಯಾಕೇಜ್’ ಅನ್ನು ಪ್ರಕಟಿಸಿದೆ. ಈ ಮೂಲಕ ಕಡಿಮೆ ದರದಲ್ಲಿ ಎರಡು ದಿನದ ಪ್ರವಾಸಕ್ಕೆ ಉತ್ತಮ ಅವಕಾಶ ನೀಡಿದೆ.

ಆರಾಮದಾಯಕ ಎಸಿ ಡಿಲಕ್ಸ್‌ ಕೋಚ್‌ ಮೂಲಕ ದಾರಿ ಸಾಗಲಿದೆ. ಈ ಟ್ರಿಪ್‌ನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದರುಶನ ವಿಐಪಿ ಸ್ಪೆಷಲ್‌ ಇರಲಿದೆ. ಇನ್ನು ಸೌತಡ್ಕ ಮಹಾಗಣಪತಿ ದೇವಸ್ಥಾನ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮತ್ತು ಆದಿ ಸುಬ್ರಹ್ಮಣ್ಯ ದೇವಸ್ಥಾನ, ಆದಿಚುಂಚನಗಿರಿ ಕ್ಷೇತ್ರ ಮತ್ತು ಐತಿಹಾಸಿಕ ಮಂಜರಾಬಾದ್ ಕೋಟೆ ವೀಕ್ಷಣೆ ಮಾಡಬಹುದಾಗಿದೆ.

ದಿನ ಒಂದು
ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಪ್ರಯಾಣ. ತಿಂಡಿಯನ್ನು ನೀಡಲಾಗುತ್ತದೆ. ತದನಂತರ ಆದಿಚುಂಚನಗಿರಿ ದೇವಾಯಲ, ಮಂಜರಾಬಾದ್ ಕೋಟೆ ಆನಂತರ ಧರ್ಮಸ್ಥಳಕ್ಕೆ ಆಗಮಿಸಿ ರೆಸ್ಟ್‌ ಮಾಡಬಹುದಾಗಿದೆ.

ದಿನ ಎರಡು
ತಿಂಡಿ, ನಂತರ ಮಂಜುನಾಥನ ದರುಶನ, ರಾಮಮಂದಿರಕ್ಕೆ ಭೇಟಿ, ಸೂರ್ಯನಾರಾಯಣ ದೇವಸ್ಥಾನ, ಶಿಶಿಲೇಶ್ವರ ದೇವಸ್ಥಾನ, ಸೌತಡ್ಕ ಶ್ರೀ ಮಹಾ ಗಣಪತಿ ದೇವಸ್ಥಾನಕ್ಕೆ ಭೇಟಿ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಆದಿ ಸುಬ್ರಹ್ಮಣ್ಯದಲ್ಲಿ ವಿಶೇಷ ದರುಶನದ ನಂತರ ಬೆಂಗಳೂರಿಗೆ ಪ್ರಯಾಣ ಮಾಡಬಹುದಾಗಿದೆ.

ಪ್ಯಾಕೇಜ್‌ನಲ್ಲಿ ತಿಂಡಿ, ಡಿಲಕ್ಸ್‌ ಬಸ್‌, ಧರ್ಮಸ್ಥಳ ವಿಐಪಿ ದರುಶನ, ತಂಗಲು ಸುಸಜ್ಜಿತ ವ್ಯವಸ್ಥೆ ಇರುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !