September 5, 2026
Saturday, September 5, 2026
spot_img

ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಿಚ್ಚು: ಗಲ್ಫ್ ರಾಷ್ಟ್ರಗಳ ಮೇಲೂ ಕ್ಷಿಪಣಿ, ಡ್ರೋನ್ ದಾಳಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಕವಿದಿದ್ದು, ಅಮೆರಿಕ ಹಾಗೂ ಇರಾನ್ ನಡುವಿನ ಜಗಳ ತಾರಕಕ್ಕೇರಿದೆ. ಹಡಗುಗಳ ಮೇಲಿನ ಇರಾನ್ ದಾಳಿಗೆ ಪ್ರತಿಯಾಗಿ, ಅಮೆರಿಕವು ಐದನೇ ಬಾರಿಗೆ ಇರಾನ್‌ನ ಖುಜಿಸ್ತಾನ್ ಪ್ರಾಂತ್ಯದ ಒಮೈದಿಯಾ ವಿಮಾನ ನಿಲ್ದಾಣದ ಮೇಲೆ ಭೀಕರ ಬಾಂಬ್ ದಾಳಿ ನಡೆಸಿದೆ.

ಇರಾನ್‌ನಿಂದ ಕ್ಷಿಪಣಿ ಮಳೆ: ದುಬೈನಲ್ಲಿ ಆತಂಕ

ಅಮೆರಿಕದ ಈ ತಕ್ಕಡಿಗೆ ಇರಾನ್ ಕೂಡ ತಿರುಗೇಟು ನೀಡಿದೆ. ಇಸ್ರೇಲ್ ಮತ್ತು ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿ ಇರಾನ್ ಕ್ಷಿಪಣಿ ದಾಳಿ ಮಾಡಿದೆ. ಕತಾರ್, ಕುವೈತ್, ಓಮನ್ ಹಾಗೂ ಬಹ್ರೇನ್ ಸೇರಿದಂತೆ ಗಲ್ಫ್ ದೇಶಗಳ ಮೇಲೆ ಡ್ರೋನ್ ದಾಳಿಗಳು ನಡೆದಿವೆ. ಇತ್ತ ದುಬೈನ ಪ್ರಸಿದ್ಧ ಪಾಮ್ ಹೋಟೆಲ್‌ನಲ್ಲಿ ಸಂಭವಿಸಿದ ಸ್ಫೋಟ ಮತ್ತು ದಟ್ಟ ಹೊಗೆ ಸಾರ್ವಜನಿಕರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಇರಾನ್‌ನ ಸರ್ವೋಚ್ಚ ನಾಯಕ ಖಮೇನಿ ಅವರ ಅಂತ್ಯಕ್ರಿಯೆಯ ನಂತರ ಈ ಪ್ರಕ್ಷುಬ್ಧತೆ ಮತ್ತಷ್ಟು ತೀವ್ರಗೊಂಡಿದೆ.

140ಕ್ಕೂ ಹೆಚ್ಚು ಸೇನಾ ನೆಲೆಗಳು ಧ್ವಂಸ: ತೈಲ ಬೆಲೆ ಗಗನಕ್ಕೆ

ಇರಾನ್‌ನ 140ಕ್ಕೂ ಹೆಚ್ಚು ವಾಣಿಜ್ಯ ಮತ್ತು ಸೇನಾ ನೆಲೆಗಳನ್ನು ಉಡಾಯಿಸಿರುವುದಾಗಿ ವಾಷಿಂಗ್ಟನ್ ಘೋಷಿಸಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕದ ನೆಲೆಗಳ ಮೇಲೆ ತಾನು ನಡೆಸಿದ ಯಶಸ್ವಿ ದಾಳಿಗಳ ವಿಡಿಯೋಗಳನ್ನು ಇರಾನ್ ಬಿಡುಗಡೆ ಮಾಡಿದೆ. ಈ ಜಾಗತಿಕ ಉದ್ವಿಗ್ನತೆಯಿಂದಾಗಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 70 ಡಾಲರ್‌ನಿಂದ ಸಡನ್ ಆಗಿ 80 ಡಾಲರ್‌ಗೆ ಏರಿಕೆಯಾಗಿದ್ದು, ಇಡೀ ವಿಶ್ವವೇ ಆರ್ಥಿಕ ಸಂಕಷ್ಟದ ಭೀತಿಯಲ್ಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !