ಹೊಸದಿಗಂತ ಡಿಜಿಟಲ್ ಡೆಸ್ಕ್:
ಆರೋಗ್ಯದ ದೃಷ್ಠಿಯಿಂದ ನಿಂಬೆ ನೀರನ್ನು ಕುಡಿಯುವುದು ಎಲ್ಲಾ ಸಮಯದಲ್ಲಿ ಬಹಳ ಉತ್ತಮ. ನೀವು ಉತ್ತಮವಾದ ದೇಹವನ್ನು ಬಯಸಿದರೆ, ಆರೋಗ್ಯ ಉತ್ತಮವಾಗಿರಬೇಕಾದರೆ ಈ ಪಾನಿ ನಿಮಗೆ ಸಹಕಾರಿಯಾಗುತ್ತದೆ. ನಿಂಬೆಯು ಅನೇಕ ಪೋಷಕಾಂಶಗಳನ್ನು ಹೊಂದಿದ್ದು, ಅದರ ಸೇವನೆಯ ವಿಧಾನವು ಋತುಮಾನಕ್ಕೆ ಅನುಗುಣವಾಗಿ ಬದಲಾಗುತ್ತದೆ.
ಬೇಸಿಗೆಯ ದಿನಗಳಲ್ಲಿ ಉಷ್ಣತೆ ಮತ್ತು ಬೆವರುವಿಕೆಯಿಂದ ದೇಹದಲ್ಲಿನ ಪೋಷಕಾಂಶಗಳ ನಷ್ಟವನ್ನು ಸರಿದೂಗಿಸಲು ಉತ್ತಮ ತಂಪು ಪಾನೀಯವಾಗಿದೆ. ಅದರಲ್ಲೂ ಚಳಿಗಾಲದಲ್ಲಿ ಶೀತ ಮತ್ತು ಜ್ವರದ ಅಪಾಯವನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲದೇ, ಚಳಿಗಾಲದಲ್ಲಿ ಬೆಳಗ್ಗೆ ನಿಂಬೆ ನೀರನ್ನು ಕುಡಿಯುವುದರಿಂದ ಹಲವು ಪ್ರಯೋಜನಗಳಿದೆ.
ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಜನರು ವಿವಿಧ ವಿಧಾನಗಳನ್ನು ಅನುಸರಿಸುತ್ತಾರೆ. ಚಳಿಗಾಲದಲ್ಲಿ ನಿಂಬೆ ರಸವನ್ನು ಕುಡಿಯುವುದರಿಂದ ನಿಮ್ಮ ರೋಗನಿರೋಧಕ ಶಕ್ತಿಯನ್ನು ಸುಲಭವಾಗಿ ಹೆಚ್ಚಿಸಬಹುದು. ಪ್ರತಿ ಋತುವಿನಲ್ಲಿ ನಿಂಬೆ ರಸವನ್ನು ಕುಡಿಯುವುದು ಪ್ರಯೋಜನಕಾರಿ.
ಬೆಳಗ್ಗಿನ ಉಪಹಾರದ ಮೊದಲು ನಿಂಬೆ ರಸವನ್ನು ಸೇವಿಸುವುದರಿಂದ ಅನೇಕ ಲಾಭಗಳಿವೆ ಎಂದು ಆರ್ಯುವೇದವು ಹೇಳುತ್ತದೆ. ಉಗುರು ಬೆಚ್ಚಗಿನ ನೀರಿಗೆ ನಿಂಬೆ ರಸವನ್ನು ಸೇರಿಸಿ ಕುಡಿಯಬೇಕು ಇದರಿಂದ ಎಷ್ಟೋ ಲಾಭಗಳಿಬೆ, ನಿಂಬೆಹಣ್ಣು ಶರೀರದಲ್ಲಿನ ಅನೇಕ ದೋಷಗಳನ್ನು ನಿವಾರಿಸುತ್ತದೆ.
ನಿಂಬೆಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.
ಬೆಚ್ಚಗಿನ ನೀರಿನಲ್ಲಿ ನಿಂಬೆ ಮಿಶ್ರಣ ಮಾಡಿ. ದಿನಕ್ಕೆ ಎರಡು ಬಾರಿ ನಿಂಬೆ ನೀರನ್ನು ಕುಡಿಯುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಈ ಸಮಯದಲ್ಲಿ ನಿಂಬೆ ರಸವನ್ನು ಕುಡಿಯುವುದು ಶೀತ ಮತ್ತು ಜ್ವರದ ಅಪಾಯವನ್ನು ಕಡಿಮೆ ಮಾಡುತ್ತದೆ.
ಬೆಳಗ್ಗೆ ನಿಂಬೆ ನೀರನ್ನು ಕುಡಿಯುವುದರಿಂದ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ ಮತ್ತು ಕೊಬ್ಬು ಕಡಿಮೆಯಾಗುತ್ತದೆ. ನಿಂಬೆ ರಸವು ತೂಕ ಇಳಿಕೆಗೆ ಬಹಳ ಸಹಾಯಕವಾಗಿದೆ.
ನಿಂಬೆ ನೀರು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಮತ್ತು ಚಯಾಪಚಯವನ್ನು ಸುಧಾರಿಸುತ್ತದೆ. ನಿಂಬೆ ರಸವನ್ನು ಜೀರಿಗೆ, ಮೆಂತ್ಯದೊಂದಿಗೆ ಸೇರಿಸಿ ಕುಡಿಯಿರಿ. ಇದು ನಿಮ್ಮ ಅಸಿಡಿಟಿಯನ್ನು ಹೋಗಲಾಡಿಸುತ್ತದೆ.
ನಿಂಬೆಹಣ್ಣಿನ ರಸವನ್ನು ಸೇವಿಸುವುದರಿಂದ ಕಣ್ಣು, ಚರ್ಮ, ಕೂದಲು ಆರೋಗ್ಯವಾಗಿರುತ್ತದೆ.
ನಿಂಬೆಹಣ್ಣಿನ ರಸದ ಜೊತೆಗೆ ಜೇನುತುಪವನ್ನು ಸೇರಿಸಿ ಕುಡಿದರೆ ಹೃದಯದ ಬಲಹೀನತೆ ನಿವಾರಣೆಗೊಳ್ಳುತ್ತದೆ.