ವಕ್ಫ್‌ ವಿವಾದ: ವಿಜಯಪುರದಲ್ಲಿ ಟೆಂಟ್‌ನಲ್ಲೇ ರಾತ್ರಿ ಕಳೆದ ರಾಜಕೀಯ ನಾಯಕರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ರಾಜ್ಯಾದ್ಯಂತ ವಕ್ಫ್‌ ವಿವಾದದ ಬಿಸಿ ಕಾವೇರಿದ್ದು, ವಿಜಯಪುರದಲ್ಲಿ ಬಿಜೆಪಿ ನಾಯಕರು ಅಹೋರಾತ್ರಿ ಧರಣಿ ನಡೆಸಿದ್ದಾರೆ.
ರೈತರ ಪಹಣಿಯಿಂದ ವಕ್ಫ್​​ ಪದ​ ತೆಗೆದುಹಾಕುವಂತೆ ಆಗ್ರಹಿಸಿ ವಿಜಯಪುರ ಡಿಸಿ ಕಚೇರಿ ಬಳಿ ರೈತರಿಂದ ಅಹೋರಾತ್ರಿ ಧರಣಿ, ಪ್ರತಿಭಟನೆ ನಡೆಯುತ್ತಿದೆ.

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಅಹೋರಾತ್ರಿ ಹೋರಾಟ ನಡೆಯುತ್ತಿದ್ದು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಾಥ್​​ ನೀಡಿದ್ದಾರೆ. ಕೇಂದ್ರ ಸಚಿವೆಯೂ ಸೇರಿದಂತೆ ನೂರಾರು ರೈತರು, ಬಿಜೆಪಿ ಕಾರ್ಯಕರ್ತರು ಧರಣಿ ನಡೆಯುತ್ತಿರುವ ಪ್ರದೇಶದ ಟೆಂಟ್​ನಲ್ಲೇ ರಾತ್ರಿ ಕಳೆದಿದ್ದಾರೆ. ಇಂದು ಪ್ರತಿಭಟನೆ ಮತ್ತೆ ಮುಂದುವರಿಯಲಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!