ಜೀವನದಲ್ಲಿ ರೆಸ್ಟ್ ಮಾಡೋಕೆ ತುಂಬಾ ದಿನಗಳಿವೆ, ವಯಸ್ಸಿದ್ದಾಗ, ಶಕ್ತಿ ಇದ್ದಾಗ ದುಡಿದುಬಿಡಬೇಕು. ಬರ್ಥ್‌ಡೇ, ಆನಿವರ್ಸರಿ ಪ್ರತಿ ವರ್ಷ ಬರುತ್ತವೆ. ಕೆಲಸ ಮಾಡಬೇಕು, ವೀಕೆಂಡ್ ಆದ್ರೇನು, ಎಕ್ಸ್ಟ್ರಾ ಕೆಲಸಕ್ಕೆ ಎಕ್ಸ್ಟ್ರಾ ದುಡ್ಡು ಸಿಗುತ್ತದೆ. ಇದೆಲ್ಲಾ ತಮಗೋಸ್ಕರ ಮಾಡೋದಲ್ಲ, ಫ್ಯಾಮಿಲಿ ಕಂಫರ್ಟ್‌ಗಾಗಿ..
ಜೀವನದಲ್ಲಿ ಕೆಲಸ ತುಂಬಾ ಇದೆ, ಯಾವಾಗಲೂ ಕೆಲಸ ಮಾಡಲೇಬೇಕು, ಆದರೆ ಆರಾಮು ಮಾಡೋದು ಯಾವಾಗ? ಯಾವ ಕ್ಷಣ ನಮ್ಮ ಜೀವನದ ಕೊನೆ ಕ್ಷಣ ಅನ್ನೋದು ಗೊತ್ತಾಗಲ್ಲ, ಆರಾಮಾಗಿ ಇರಬೇಕು, ಆದರೆ ರಿಟೈರ್ ವಯಸ್ಸಿಗೆ ಬಂದಾಗ ಹಣ ಎಲ್ಲಿದೆ? ವಯಸ್ಸಿದ್ದಾಗ ಸರಿಯಾಗಿ ಕೆಲಸ ಮಾಡದೇ ಆಮೇಲೆ ತುತ್ತಿನ ಊಟಕ್ಕೂ ಅವರಿವರ ಮುಂದೆ ಕೈಚಾಚುವ ಪರಿಸ್ಥಿತಿ ಬಂದ್ರೆ ಏನು ಮಾಡ್ತೀರಿ?
ಈ ಎರಡು ಎರಡು ರೀತಿಯ ಎಕ್ಸ್ಟ್ರೀಮ್‌ಗಳು ಒಬ್ಬರಿಗೆ ಕೆಲಸವೇ ಎಲ್ಲ, ಇನ್ನೊಬ್ಬರಿಗೆ ಕೆಲಸವೇ ಇಷ್ಟ ಇಲ್ಲ. ಬಟ್ ಎರಡನ್ನೂ ಮ್ಯಾನೇಜ್ ಮಾಡೋದು ಮುಖ್ಯ. ರಜೆ ಇದೆ ಅಥವಾ ವೀಕೆಂಡ್ ಎಂದರೆ ಫೋನ್ ಎತ್ತಿಟ್ಟು ಮನೆಯಲ್ಲಿ ಯಾರ ಜೊತೆ ಇದ್ದೀರಿ ಮನಸ್ಸು ಹಾಗೂ ದೇಹ ಎರಡೂ ಒಂದೇ ಕಡೆ ಇರುವಂತೆ ನೋಡಿಕೊಳ್ಳಿ.
ಈ ಬ್ಯಾಲೆನ್ಸ್ ಹೇಗೆ ಮಾಡೋದು?
ನಿಮ್ಮ ಕಂಪನಿಯ ಪಾಲಿಸಿಗಳನ್ನು ಅರಿತುಕೊಳ್ಳಿ. ಇಲ್ಲಿ ಕುಟುಂಬಗಳಿಗೆ ಬೆಲೆ ಇದ್ಯಾ? ಅಥವಾ ವೀಕೆಂಡ್‌ನಲ್ಲಿ ಕೆಲಸ ಮಾಡಿದವರನ್ನು ಹೆಚ್ಚು ಇಷ್ಟಪಡ್ತಾರಾ ಗಮನಿಸಿ..
ಬೌಂಡರಿ ಇರಲಿ, ಕೆಲಸಕ್ಕೆ ಕೆಲಸ, ಜೀವನಕ್ಕೆ ಜೀವನ ಎರಡರ ಮಧ್ಯೆ ಬೌಂಡರಿ ಇರಲಿ, ಬ್ಯಾಲೆನ್ಸ್ ಮಾಡೋದಕ್ಕೆ ಸಮಯ ನೀಡಿ.
ಗೋಲ್ಸ್ ಸೆಟ್ ಮಾಡಿ, ಒಂದು ತಿಂಗಳಿನಲ್ಲಿ ಯಾವುದೇ ಹಬ್ಬ ಬಂದಿಲ್ಲ, ಬಟ್ ವೀಕೆಂಡ್ ಮಾತ್ರ ಮನೆಲಿದ್ದೀರಿ, ರಜೆಗಳು ವೇಸ್ಟ್ ಆಗ್ತಿದೆ. ನಾಲ್ಕು ದಿನದ ಟ್ರಿಪ್ ಪ್ಲ್ಯಾನ್ ಮಾಡಿ ಬ್ಯಾಲೆನ್ಸ್ ಮಾಡಿ.
ಕುಟುಂಬದವರಿಗೆ ನಿಮ್ಮ ಕೆಲಸದ ಬಗ್ಗೆ ಅರ್ಥ ಮಾಡಿಸಿ, ಕೆಲಸದಲ್ಲಿ ಕುಟುಂಬದ ಬಗ್ಗೆ ಪರಿಚಯ ಮಾಡಿಸಿ. ಶೆಡ್ಯೂಲ್ ಇರಲಿ, ಅದಕ್ಕೆ ತಕ್ಕಂತೆ ನಡೆದುಕೊಳ್ಳಿ.
ಆಫೀಸ್ ಹತ್ತಿರವೇ ಮನೆ ಇದ್ದರೆ ಬೆಸ್ಟ್. ಟ್ರಾವೆಲ್ ಮಾಡುವ ಸಮಯ ಫ್ಯಾಮಿಲಿಗೂ ಅಲ್ಲ, ಆಫೀಸ್‌ಗೂ ಅಲ್ಲ. ಹಾಗಾಗಿ ಹತ್ತಿರವಿದ್ದಷ್ಟು ಉತ್ತಮ.
ನೆನಪಿಡಿ, ಆಫೀಸ್ ಹಣ ನೀಡುತ್ತದೆ, ಮನೆ ನೆಮ್ಮದಿ. ಮನೆಯಲ್ಲಿ ಎಲ್ಲವೂ ಸರಿ ಇದ್ದರೆ ಮಾತ್ರ ಆಫೀಸ್‌ನಲ್ಲಿ ಉತ್ತಮ ಪರ್ಫಾಮೆನ್ಸ್ ಕೊಡ್ತೀರಿ. ಇನ್ನು ಆಫೀಸ್‌ನಲ್ಲಿ ಕಿರಿಕಿರಿ ಇಲ್ಲದಿದ್ದರೆ ಮಾತ್ರ ಮನೆಯಲ್ಲಿ ನೆಮ್ಮದಿಯಾಗಿರ್ತೀರಿ. ಕೆಲಸದಿಂದ ನಿಮ್ಮನ್ನು ತೆಗೆದುಹಾಕಬಹುದು, ನಿಮ್ಮನ್ನು ಇನ್ನೊಬ್ಬರು ಅತಿ ಸುಲಭವಾಗಿ ರಿಪ್ಲೇಸ್ ಮಾಡಬಹುದು. ಆದರೆ ಮನೆಯಲ್ಲಿ ನೀವೇ ತಂದೆ-ತಾಯಿ, ಮಗ-ಮಗಳು, ನಿಮ್ಮನ್ನು ರಿಪ್ಲೇಸ್ ಮಾಡೋದಕ್ಕೆ ಆಗೋದಿಲ್ಲ. ಎರಡರ ಮಧ್ಯೆ ಬ್ಯಾಲೆನ್ಸ್ ಇಟ್ಟುಕೊಂಡು ಜೀವನ ನಡೆಸಿ..