ಹೊಸದಿಗಂತ ಡಿಜಿಟಲ್ ಡೆಸ್ಕ್:
ವಕ್ಫ್ ಭೂತ ರಾಜ್ಯದಲ್ಲಿ ಕ್ಯಾನ್ಸರ್ ರೀತಿಯಲ್ಲಿ ಹಬ್ಬುತ್ತಿದೆ. ಹಿಂದೂಗಳ ಭೂಮಿಯನ್ನು ವಕ್ಫ್ ಕಬಳಿಕೆ ಮಾಡುತ್ತಿದೆ. ರೈತರು, ದೇವಾಲಯ, ಮಠ ಮಾನ್ಯಗಳ ಜಮೀನು ವಕ್ಫ್ ಆಸ್ತಿ ಎಂದು ತೋರಿಸುವ ಕೆಲಸ ಮಾಡಲಾಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದರು.
ಕೋಡಂಬಹಳ್ಳಿ ಪಂಚಾಯಿತಿ ವ್ಯಾಪ್ತಿಯ ಹುಣಸನಹಳ್ಳಿ ಗ್ರಾಮದಲ್ಲಿ ಎನ್‌ಡಿಎ ಅಭ್ಯರ್ಥಿ ನಿಖಿಲ್ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕರ್ನಾಟಕ ಭಾರತದಲ್ಲಿ ಇದೆಯಾ? ಅಥವಾ ಪಾಕಿಸ್ತಾನದಲ್ಲಿ ಇದೆಯಾ? ರಾಜ್ಯ ಕಾಂಗ್ರೆಸ್ ಸರ್ಕಾರ ಒಂದು ಸಮುದಾಯಕ್ಕೆ ಒಂದು ಕಾನೂನು, ಹಿಂದೂ ಸಮಾಜಕ್ಕೆ ಇನ್ನೊಂದು ಕಾನೂನು ಎಂದು ವರ್ತಿಸುತ್ತಿದೆ. ದೇವಾಲಯಗಳು, ಮಠಮಾನ್ಯಗಳ ಜಮೀನುಗಳು ವಕ್ಫ್ ಆಸ್ತಿ ಎಂದು ತೋರಿಸುವ ಕೆಲಸ ಮಾಡಲಾಗುತ್ತಿದೆ. ರೈತರ ಜಮೀನಿನ ಪಹಣಿಯಲ್ಲಿ ವಕ್ಫ್, ದರ್ಗಾ ಆಸ್ತಿ ಎಂದು ಬರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.