ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಗಂಜಿಮಠ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಳಲಿ ಪೇಟೆಯ ಮಸೀದಿಯೊಂದರ ಒಳಗೆ ದೇವಸ್ಥಾನ ಗರ್ಭಗುಡಿ ಮಾದರಿಯ ನಿರ್ಮಾಣ ಪತ್ತೆ ಪ್ರಕರಣಕ್ಕೆ ಮತ್ತೊಂದು ತಿರುವು ಕಂಡಿದ್ದು, ಸ್ಥಳೀಯ ಹಿಂದುಗಳ ಸಭೆ ನಡೆಸಿ ಅಭಿಪ್ರಾಯ ಪಡೆದು ಅಷ್ಟಮಂಗಳ ಚಿಂತನ ಪ್ರಶ್ನೆಗೆ ಹಿಂದು ಸಂಘಟನೆಗಳು ನಿರ್ಧರಿಸಿವೆ.
ವಿವಾದದ ಬಗ್ಗೆ ಈಗಾಗಲೇ ಪೊಳಲಿ ದೇವಸ್ಥಾನದ ಶ್ರೀ ರಾಜರಾಜೇಶ್ವರಿ ದೇವಿಯ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಲಾಗಿದೆ.
ಇಲ್ಲಿನ ಅಸ್ಸಯಿದ್ ಅಬ್ದುಲ್ಲಾಹಿಲ್ ಮದನಿ ದರ್ಗಾ ಶರೀಫ್ ಜುಮಾ ಮಸೀದಿಯ ಒಳಭಾಗದಲ್ಲಿ ಕಂಡುಬಂದಿರುವ ನಿರ್ಮಾಣವು ದೇವಸ್ಥಾನವೊ? ಬ್ರಹ್ಮ ಸ್ಥಾನವೋ? ಅಥವಾ ಜೈನ ಬಸದಿಯೋ? ಎಂಬ ಕುತೂಹಲ ಹಾಗೆಯೇ ಉಳಿದಿರುವಂತೆಯೇ ಈ ಬೆಳವಣಿಗೆ ನಡೆದಿದೆ.
ಏಪ್ರಿಲ್‌ನಲ್ಲಿ ಮಸೀದಿಯ ಕೆಲವು ಭಾಗಗಳನ್ನು ನವೀಕರಣದ ಸಲುವಾಗಿ ಕೆಡವಿದಾಗ ದೇವಸ್ಥಾನ ಇರುವಿಕೆ ಬಹಿರಂಗವಾಗಿತ್ತು.