ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೀತು ಮೋಹನ್‌ದಾಸ್ ನಿರ್ದೇಶನದಲ್ಲಿ, ಯಶ್ ನಟನೆಯ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನೆಮಾ ರಿಲೀಸ್ ಆಗಿ ವಾರ ಕಳೆಯಿತು. ವರ್ಲ್ಡ್‌ವೈಡ್ ಭಾರಿ ಸೌಂಡ್ ಮಾಡಿಕೊಂಡು ಬಂದ ಈ ಚಿತ್ರಕ್ಕೆ ಗಾಂಧಿನಗರದಿಂದ ಹಿಡಿದು ಗ್ಲೋಬಲ್ ಮಟ್ಟದವರೆಗೆ ಸಿಕ್ಕಿದ್ದು ಮಾತ್ರ ಮಿಕ್ಸ್‌ಡ್ ರಿಯಾಕ್ಷನ್. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಒಟ್ಟಿಗೇ ಶೂಟ್ ಮಾಡಿ, ಆಮೇಲೆ ಹಿಂದಿ ಸೇರಿದಂತೆ ಎಲ್ಲಾ ದಕ್ಷಿಣ ಭಾರತದ ಭಾಷೆಗಳಿಗೆ ಡಬ್ ಮಾಡಿ ರಿಲೀಸ್ ಮಾಡಲಾಗಿತ್ತು. ಆದರೆ, ಭಾರತದಲ್ಲಿ ಇಂಗ್ಲಿಷ್ ವರ್ಷನ್ ಯಾಕೆ ರಿಲೀಸ್ ಆಗಿಲ್ಲ ಅನ್ನೋ ದೊಡ್ಡ ಡೌಟ್ ಫ್ಯಾನ್ಸ್ ತಲೆಯಲ್ಲಿ ಓಡ್ತಿತ್ತು.

ಈಗ ಕೊನೆಗೂ ಚಿತ್ರತಂಡ ಆ ಸಸ್ಪೆನ್ಸ್ ಔಟ್ ಮಾಡಿದೆ. ಸೆಪ್ಟೆಂಬರ್ 4 ರಿಂದ ಭಾರತದ ಆಯ್ದ ಥಿಯೇಟರ್‌ಗಳಲ್ಲಿ ‘ಟಾಕ್ಸಿಕ್’ ಇಂಗ್ಲಿಷ್ ವರ್ಷನ್ ರಿಲೀಸ್ ಆಗ್ತಿದೆ. ಅದೂ ಕೂಡ ಒರಿಜಿನಲ್ ಕನ್ನಡ ವರ್ಷನ್‌ಗಿಂತ ಸ್ವಲ್ಪ ಶಾರ್ಟ್ ಆಗಿರೋ ಕಟ್‌ನೊಂದಿಗೆ.
ಏನಿದು ಹೊಸ ಸೀಕ್ರೆಟ್ ಪ್ಲಾನ್?
CBFC ವೆಬ್‌ಸೈಟ್ ಪ್ರಕಾರ, ಆಗಸ್ಟ್ 13 ರಂದು ಸರ್ಟಿಫಿಕೇಟ್ ಪಡೆದಿದ್ದ ಕನ್ನಡ ‘ಟಾಕ್ಸಿಕ್’ ಅವಧಿ 194.12 ನಿಮಿಷ (ಅಂದರೆ 3 ಗಂಟೆ 14 ನಿಮಿಷ). ಆದರೆ ಸೆಪ್ಟೆಂಬರ್ 1 ರಂದು ‘A’ ಸರ್ಟಿಫಿಕೇಟ್ ಪಡೆದ ಇಂಗ್ಲಿಷ್ ವರ್ಷನ್ ಅವಧಿ 176.52 ನಿಮಿಷ (2 ಗಂಟೆ 56 ನಿಮಿಷ) ಅಂದರೆ ಪಕ್ಕಾ 17-18 ನಿಮಿಷದ ದೃಶ್ಯಗಳಿಗೆ ಕತ್ತರಿ ಬಿದ್ದಿದೆ. ವಿದೇಶಗಳಲ್ಲಿ ಮೊದಲ ದಿನವೇ ಇಂಗ್ಲಿಷ್ ವರ್ಷನ್ ರಿಲೀಸ್ ಮಾಡಿದ್ದ ಮೇಕರ್ಸ್, ನಮ್ಮಲ್ಲಿ ಮಾತ್ರ ಯಾಕೆ ತಡ ಮಾಡಿದ್ರು ಅನ್ನೋದು ಇನ್ನು ಸೀಕ್ರೆಟ್ ಆಗಿ ಉಳಿದಿದೆ. ಸದ್ಯಕ್ಕೆ ಬೆಂಗಳೂರು, ಮುಂಬೈನಲ್ಲಿ ಇಂಗ್ಲಿಷ್ ಶೋಗಳಿಗೆ ಬುಕಿಂಗ್ ಓಪನ್ ಆಗಿದೆ.

ಇದೇನ್ ಲಾಜಿಕ್?
ಈ ಹೊಸ ಅನೌನ್ಸ್‌ಮೆಂಟ್ ಬರ್ತಿದ್ದಂಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಯೇ ಶುರುವಾಗಿದೆ. “ಪ್ಯಾನ್ ಇಂಡಿಯಾ ಸ್ಟಾರ್ ಅಂದ್ಮೇಲೆ ಕನ್ನಡ ಮತ್ತೆ ಹಿಂದಿಯಲ್ಲೇ ಡೈರೆಕ್ಟ್ ಆಗಿ ಶೂಟ್ ಮಾಡೋದು ಬಿಟ್ಟು, ಈ ಇಂಗ್ಲಿಷ್ ಉಸಾಬರಿ ಯಾಕೆ ಬೇಕಿತ್ತು?” ಎಂದು ಒಂದಷ್ಟು ಜನ ಕ್ಲಾಸ್ ತಗೋತಿದ್ದಾರೆ. ಇನ್ನೊಂದಷ್ಟು ಜನ “ಕನ್ನಡದಲ್ಲಿ ಕಟ್ ಆಗಿರೋ ಸೀನ್‌ಗಳು ಇಂಗ್ಲಿಷ್‌ನಲ್ಲಿ ಇರುತ್ತಾ ಅಥವಾ ಇಂಗ್ಲಿಷ್‌ನಲ್ಲೂ ಟ್ರಿಮ್ ಮಾಡಿದ್ದೀರಾ?” ಎಂದು ಕನ್ಫ್ಯೂಸ್ ಆಗ್ತಿದ್ದಾರೆ.
ಒಟ್ಟಿನಲ್ಲಿ, ಮೊದಲೇ ಸಿನಿಮಾ ಸ್ವಲ್ಪ ಡಲ್ ಹೊಡಿತಿರೋವಾಗ, ಈ 18 ನಿಮಿಷ ಶಾರ್ಟ್ ಇರೋ ಇಂಗ್ಲಿಷ್ ವರ್ಷನ್ ಜನರನ್ನು ಥಿಯೇಟರ್‌ಗೆ ಎಳೆದುಕೊಂಡು ಬರುತ್ತಾ? ಅಥವಾ ಯಶ್ ಅವರ ಈ ಇಂಗ್ಲಿಷ್ ಪ್ರಯೋಗ ವರ್ಕ್ಔಟ್ ಆಗುತ್ತಾ? ಅನ್ನೋದನ್ನ ಸೆಪ್ಟೆಂಬರ್ 4ರ ನಂತ್ರವೇ ಕಾದು ನೋಡಬೇಕಿದೆ.



