ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದಲ್ಲಿ ಕೆಲವೆಡೆ ವಿದ್ಯುನ್ಮಾನ ಮತಯಂತ್ರಗಳನ್ನು ಹ್ಯಾಕ್ ಮಾಡಿರುವ ಸಾಧ್ಯತೆಗಳಿವೆ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಮಹಾರಾಷ್ಟ್ರದ ವೀಕ್ಷಕರೂ ಆಗಿರುವ ಸಚಿವ ಜಿ ಪರಮೇಶ್ವರ್ ಹೇಳಿದರು.
ಕಳೆದ 15 ವರ್ಷಗಳಿಂದ ಇವಿಎಂ ಬಳಸದಂತೆ ನಾವು ಒತ್ತಾಯಿಸುತ್ತಿದ್ದೇವೆ. ಪೇಪರ್ ಬ್ಯಾಲೆಟ್‌ಗೆ ಮರಳಿ, ಇವಿಎಂಗಳನ್ನು ತೆಗೆದುಹಾಕಬಾರದೇಕೆ? ವಾಸ್ತವವಾಗಿ, ಎಐಸಿಸಿ ಒಂದು ಸಮಿತಿಯನ್ನು ರಚಿಸಿತ್ತು. ಆದರೆ, ಅಧಿಕಾರ ಅವರ ಬಳಿ ಇದೆ (ಕೇಂದ್ರ), ಕೆಲವು ಎನ್‌ಡಿಎ ನಾಯಕರು ವಿರೋಧಿಸುತ್ತಿದ್ದಾರೆ ಎಂದು ಹೇಳಿದರು.
ನ್ಯಾಯಸಮ್ಮತ ಚುನಾವಣೆಗೆ ಪೇಪರ್ ಬ್ಯಾಲೆಟ್ ವ್ಯವಸ್ಥೆ ತರುವುದು ಮತ್ತು ಇವಿಎಂ ರದ್ದು ಮಾಡುವುದು ಉತ್ತಮವಾಗಿದೆ. ಭಾರತದಲ್ಲಿ ಇವಿಎಂಗೆ ವಿರೋಧವಿದೆ, ಅಮೆರಿಕದಲ್ಲಿಯೂ ಸಹ ವಿರೋಧ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು.