ಕೊಪ್ಪಳದಲ್ಲಿ ಅಪರೂಪದ ಉರಿ ಉಯ್ಯಾಲೆ ಬಲಿದಾನದ ಸ್ಮಾರಕಗಳು ಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕುಷ್ಟಗಿ ತಾಲೂಕಿನ ಬಿಳಗಿ ಗ್ರಾಮದ ಕೆರೆಯೊಂದರ ಬಳಿ ಎರಡು ಉಯ್ಯಾಲೆ ಬಲಿದಾನದ ಸ್ಮಾರಕಗಳು ಪತ್ತೆಯಾಗಿವೆ. ಇದನ್ನು ಕನ್ನಡದಲ್ಲಿ “ಉರಿ ಉಯ್ಯಾಲೆ” ಎಂದು ಕರೆಯಲಾಗುತ್ತದೆ.

ಈ ಅಪರೂಪದ ಸ್ಮಾರಕಗಳು ಸುಮಾರು 1,000 ವರ್ಷಗಳ ಹಿಂದೆ ಜನರು ಮಾಡಿದ ತ್ಯಾಗವನ್ನು ವಿವರಿಸುತ್ತವೆ. ಇತಿಹಾಸಕಾರರ ಪ್ರಕಾರ ಇಂತಹ ಸ್ಮಾರಕಗಳು ಈ ಹಿಂದೆ ಮಂಡ್ಯ, ಗದಗ, ಧಾರವಾಡ, ಚಾಮರಾಜನಗರದಲ್ಲಿ ಕಂಡುಬಂದಿವೆ. ಉರಿ ಉಯ್ಯಾಲೆ ಎಂದರೆ ಬೆಂಕಿ(ಉರಿ)ಯ ಮೇಲೆ ತೂಗಾಡುವುದು ಎಂದರ್ಥ.

ಆತ್ಮಬಲಿದಾನಗಳಲ್ಲಿ ಒಂದಾದ ಈ ಹರಕೆಯು ಬಹಳ ವಿರಳ ಮತ್ತು ವಿಶೇಷ. ಹಿಂದೆ, ಜನರು ತಮ್ಮ ಮಕ್ಕಳಿಲ್ಲದ ಆಡಳಿತಗಾರರಿಗೆ ಪುತ್ರರು ಅಥವಾ ಪುತ್ರಿಯರನ್ನು ಆಶೀರ್ವದಿಸಬೇಕೆಂದು ದೇವರಿಗೆ ಮೊರೆ ಹೋಗಿ ಉಯ್ಯಾಲೆಯ ಮೇಲೆ ಕುಳಿತು ಅಥವಾ ನಿಂತು ( ಅಗ್ನಿದೇವನಿಗೆ ತಮ್ಮನ್ನು ಅರ್ಪಿಸಿಕೊಳ್ಳುತ್ತಾರೆ) ಬೆಂಕಿ ಹಚ್ಚಿಕೊಳ್ಳುತ್ತಿದ್ದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!