Tuesday, June 6, 2023

Latest Posts

ಕೊರೋನಾದಿಂದ ಆಫ್ರಿಕಾ ಸರಣಿಯಿಂದ ಹೊರಬಿದ್ದ ವಾಷಿಂಗ್ಟನ್ ಸುಂದರ್​: ಜಯಂತ್, ಸೈನಿಗೆ ಚಾನ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೊರೋನಾ ಹಿನ್ನೆಲೆ ಟೀಮ್ ಇಂಡಿಯಾ ಸ್ಪಿನ್ನರ್​ ವಾಷಿಂಗ್ಟನ್ ಸುಂದರ್​ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಿಂದ ಹೊರಬಿದ್ದಿದ್ದು, ಇವರ ಬದಲಿಗೆ ಆಲ್​ರೌಂಡರ್​ ಜಯಂತ್ ಯಾದವ್​ ತಂಡ ಸೇರಿಕೊಂಡಿದ್ದಾರೆ.
ಇತ್ತ ಟೆಸ್ಟ್​ ಸರಣಿಯ ವೇಳೆ ಸ್ನಾಯುಸೆಳೆತಕ್ಕೆ ಒಳಗಾಗಿರುವ ವೇಗಿ ಮೊಹಮ್ಮದ್ ಸಿರಾಜ್ ಅವರಿಗೆ ಸಾಥ್ ಆಗಿ ನವದೀಪ್ ಸೈನಿ ಕೂಡ ಆಫ್ರಿಕಾ ವಿಮಾನವೇರಲಿದ್ದಾರೆ.
ವಾಷಿಂಗ್ಟನ್ ಸುಂದರ್​ಗೆ ಬೆಂಗಳೂರಿನಲ್ಲಿ ತರಬೇತಿ ಶಿಬಿರದಲ್ಲಿದ್ದ ವೇಳೆ ಕೋವಿಡ್​ ತಗುಲಿದೆ.
ಜನವರಿ 19 ಮತ್ತು 21ರಂದು ಪರ್ಲ್​ನಲ್ಲಿ ಟೀಂ ಇಂಡಿಯಾ ಏಕದಿನ ಪಂದ್ಯಗಳನ್ನಾಡಲಿದೆ. ಕೇಪ್​ಟೌನ್​ನಲ್ಲಿ ಕೊನೆಯ ಏಕದಿನ ಪಂದ್ಯವನ್ನಾಡಿ ತಂಡ ತವರಿಗೆ ಮರಳಲಿದೆ. ಇನ್ನು ಈ ತಂಡವನ್ನು ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಕೆ.ಎಲ್‌.ರಾಹುಲ್​ ಮುನ್ನಡೆಸುತ್ತಿದ್ದಾರೆ. ಜಸ್​ಪ್ರೀತ್ ಬುಮ್ರಾ ತಂಡದ ಉಪನಾಯಕನಾಗಿದ್ದಾರೆ.
ಭಾರತ ಏಕದಿನ ತಂಡ:
ಕೆ.ಎಲ್.ರಾಹುಲ್ (ನಾಯಕ), ಜಸ್​ಪ್ರೀತ್ ಬುಮ್ರಾ (ಉಪನಾಯಕ), ಶಿಖರ್ ಧವನ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ರಿಷಬ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಯುಜ್ವೇಂದ್ರ ಚಹಲ್, ಆರ್.ಅಶ್ವಿನ್, ಭುವನೇಶ್ವರ್ ಕುಮಾರ್, ದೀಪಕ್ ಚಾಹರ್, ಪ್ರಸಿದ್ಧ್ ಕೃಷ್ಣ, ಶಾರ್ದೂಲ್ ಠಾಕೂರ್, ಎಂ.ಡಿ.ಸಿರಾಜ್, ಜಯಂತ್ ಯಾದವ್, ನವದೀಪ್ ಸೈನಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!