ವೈದ್ಯೆಯಾಗುವ ಬಾಲಕಿಯ ಕನಸಿಗೆ ಸರ್ಕಾರ ನೆರವೆಂಬ ನೀರೆರೆಯಬೇಕಿದೆ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನೂನ್ಯತೆ ದೇಹಕ್ಕಿರಬಹುದು ಆದರೆ ಮನಸಿಗಲ್ಲ. ಈ ಪುಟ್ಟ ಬಾಲಕಿಯ ಆತ್ಮಸ್ಥೈರ್ಯಕ್ಕೆ ಎಂಥವರೂ ತಲೆ ಬಾಗಲೇಬೇಕು. ದೇಹದ ಅಂಗಾಂಗ ಸರಿಯಿದ್ದರೂ ಕುಂಟು ನೆಪವೊಡ್ಡುವ ಜನರ ಮಧ್ಯೆ ತನ್ನ ಕನಸನ್ನು ನನಸು ಮಾಡಿಕೊಳ್ಳಲು ಪ್ರಿಯಾಂಶು ಕುಮಾರಿಯ ಸಾಹಸ ಅಷ್ಟಿಷ್ಟಲ್ಲ. ಬಿಹಾರದ ಸಿವಾನ್‌ನಲ್ಲಿ ನೆಲೆಸಿರುವ ಬಾಲಕಿ ಪ್ರಿಯಾಂಶು ಕುಮಾರಿ ಒಂಟಿ ಕಾಲಿನಲ್ಲಿಯೇ ಬದುಕು ನಡೆಸುತ್ತಿದ್ದಾಳೆ. ವೈದ್ಯೆಯಾಗಬಯಸುವ ತನ್ನ ಕನಸು ನನಸು ಮಾಡಿಕೊಳ್ಳಲು ಪ್ರತಿದಿನ ಎರಡು ಕಿಮೀ ದೂರದಲ್ಲಿರುವ ತನ್ನ ಶಾಲೆ ತಲುಪಲು ಹರಸಾಹಸ ಪಡುವಂತಾಗಿದೆ.

ಈ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಿರುವ ಬಾಲಕಿ “ನನಗೆ ಪ್ರಾಸ್ಥೆಟಿಕ್ ಅಂಗವನ್ನು(ಕೃತಕ ಕಾಲು) ಒದಗಿಸುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತೇನೆ.  ನಾನು ಬಾಲ್ಯದಿಂದಲೂ ಹೀಗೆಯೇ ಇದ್ದೇನೆ, ಈ ವಿಕಲತೆಯಿಂದ ನನ್ನ ಕನಸುಗಳನ್ನು ಬಿಟ್ಟುಕೊಡಲು ನಾನು ಸಿದ್ಧಳಿಲ್ಲʼ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!