ಫಾಲಿಂಗ್‌ ಡೌನ್‌ ಫ್ಯಾಷನ್‌ ಶೋ!: ರ್ಯಾಂಪ್‌ ವಾಕ್‌ ಮಾಡುತ್ತಾ ಕೆಳಗೆ ಬಿದ್ದ ಮಾಡೆಲ್‌ಗಳ ವಿಡಿಯೋ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಫ್ಯಾಶನ್ ಶೋ….ಎಂದರೆ ಮನಮೋಹಕ ಹೆಂಗಳೆಯರು ಹಂಸ ನಡಿಗೆಯಲ್ಲಿ ಬಂದು ನೋಡುಗರ ಮನಸೆಳೆಯುವ ಸುಂದರ ಕಾರ್ಯಕ್ರಮ. ವಿವಿಧ ಅಲಂಕಾರದಲ್ಲಿ ಅವರ ಸಂಸ್ಕೃತಿ, ಸಂಪ್ರದಾಯ ಬಿತ್ತರಿಸುವ ಅಮೋಘ ಕ್ಷಣ. ಸಾವಿರಾರು ಜನ ನೆರೆದಿರುವ ಜಾಗದಲ್ಲಿ ಅಪ್ಪಿ-ತಪ್ಪಿ ಸ್ವಲ್ಪ ಕಾಲು ಜಾರಿದರೂ ಎಲ್ಲರೆದುರು ತಪಕ್‌ ಅಂತ ಬೀಳೋದು ಕೂಡ ನಾವು ಕಂಡಿದ್ದೇವೆ. ಅಂಥದ್ದೇ ಒಂದು ಘಟನೆ ಫ್ಯಾಷನ್‌ ಶೋನಲ್ಲಿ ನಡೆದಿದೆ. ಬಂದ ಪ್ರತಿಯೊಬ್ಬ ಮಾಡೆಲ್‌ ಕೂಡ ಜಾರಿ ಬೀಳುತ್ತಿದ್ದಾರೆ. ಈ ವಿಡಿಯೋ ಈಗ ವೈರಲ್‌ ಆಗಿದೆ. ಅಲ್ಲಿದ್ದವರಿಗೆಲ್ಲ ಏನೆಂದು ಅರ್ಥವಾಗದೆ ತಬ್ಬಿಬ್ಬಾದರು.

ಸತ್ಯಸಂಗತಿ ಏನಪ್ಪಾ ಅಂದ್ರೆ, ಕ್ರಿಯೇಟಿವ್ ಡೈರೆಕ್ಟರ್ ಬೇಟೆ ಕಾರ್ಲ್ಸನ್ ಅವರ ಹೊಸ ಫ್ಯಾಷನ್ ವೀಕ್ ಶೋ ‘ಅವಾವವ್‌’ನಲ್ಲಿ ರ್ಯಾಂಪ್ ವಾಕ್‌ ಮಾಡುವಾಗ ಜಾರಿ ಬಿದ್ದಂತೆ ನಟಿಸುವುದು ಈ ಶೋನ ವಿಶೇಷತೆ. ಅದು ಅಲ್ಲಿದ್ದವರಿಗೆ ತಿಳಿಯದೆ ಪಾಪ ಕಂಗಾಲಾಗಿದ್ದರು. ಬಳಿಕ ನಿಜ ಗೊತ್ತಾದ ನಂತರ ಮಾಡೆಲ್‌ಗಳ ಚಾಣಾಕ್ಷತನಕ್ಕೆ ಚಪ್ಪಾಳೆ ತಟ್ಟಿದ್ದಾರೆ. ವೇದಿಕೆ ಮೇಲೆ ಬೀಳೋದೆಂದರೆ, ಅಚಾನಕ್‌ ಆಗಿ ಸರ್ವೆ ಸಾಮಾನ್ಯವಾಗಿ ಕಾಲು ಜಾರಿ ಬಿದ್ದಂತಿರಬೇಕು. ಎಲ್ಲೂ ಅದು ಡ್ರಾಮಾ ಎಂದು ತಿಳಿಯದಂತಿರುವುದೇ ಟಾಸ್ಕ್.‌ ಎಲ್ಲಾ ಮಾಡೆಲ್‌ಗಳೂ ಅದ್ಭುತವಾಗಿ ಭಾಗವಹಿಸಿದ್ದು, ಈ ಶೋ ಈಗ ಎಲ್ಲರ ಗಮನ ಸೆಳೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!