ಚೀಲದಲ್ಲಿ ಮೂಕ ಜೀವಿಗಳ ಕಳ್ಳಸಾಗಣೆ: ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದ ಖದೀಮರು ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅರಣ್ಯ ಪ್ರಾಣಿಗಳ ಸಾಗಣೆಗೆ ಅನೇಕ ಅಂತರರಾಷ್ಟ್ರೀಯ ನಿರ್ಬಂಧಗಳಿವೆ. ಯಾವುದೇ ಪ್ರಾಣಿಯನ್ನು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಸಾಗಿಸಲು ಎರಡೂ ಸರ್ಕಾರಗಳ ಅನುಮತಿ ಅಗತ್ಯವಿದೆ. ಹಾಗಾಗಿಯೇ ಅನುಮತಿಯಿಲ್ಲದ ಪ್ರಾಣಿಗಳನ್ನು ಬೇರೆ ದೇಶಕ್ಕೆ ಸಾಗಿಸಲು ಕಳ್ಳಸಾಗಾಣಿಕೆ ಮಾಡುತ್ತಾರೆ.

ಅಧಿಕಾರಿಗಳ ಕೈಗೆ ಸಿಕ್ಕಿ ಬೀಳುವ ಭಯದಲ್ಲಿ ಚೀಲಗಳಲ್ಲಿ ತುಂಬಿ ಅಮಾನವೀಯ ವರ್ತಿಸುತ್ತಾರೆ. ಹೀಗೆ ಚೆನ್ನೈನ ವಿಮಾನ ನಿಲ್ದಾಣದಲ್ಲಿ ಕೂಡ ಅಕ್ರಮವಾಗಿ ಮೂಕಪ್ರಾಣಿಗಳನ್ನು ಕಳ್ಳಸಾಗಣೆ ಮಾಡುವಾಗ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಮುಂಗುಸಿ ಹಾಗೂ ಕಾಸ್ಕಸ್ ಜೀವಿಗಳನ್ನು ಚೆಕ್‌ ಇನ್‌ ಬ್ಯಾಗ್‌ನಲ್ಲಿ ಸಾಗಿಸುತ್ತಿದ್ದ ವೇಳೆ ಅಧಿಕಾರಿಗಳು ಹಿಡಿದಿದ್ದಾರೆ. ಕಳ್ಳಸಾಗಣೆದಾರರು ಥಾಯ್ಲೆಂಡ್‌ನಿಂದ ಇವುಗಳನ್ನು ತಂದಿದ್ದಾರೆ ಎಂಬುದು ತನಿಖೆಯಲ್ಲಿ ತಿಳಿದಿದೆ.

ಘಟನೆಯ ವಿಡಿಯೋವನ್ನು ಅಧಿಕಾರಿಗಳು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!