ಅಪಾರ್ಟ್‌ಮೆಂಟ್‌ಗೆ ರಾಕೆಟ್‌ ಹಾರಿಸಿದ ಭೂಪ: ಯುವಕನ ಹುಚ್ಚಾಟದ ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೀಪಾವಳಿಯಂದು ಪಟಾಕಿ ಹೊಡೆಯುವುದು ಎಲ್ಲರಿಗೂ ಇಷ್ಟವೇ ಆದರೆ ನಮ್ಮ ಮೋಜು ಮತ್ತೊಬ್ಬರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಬೇಕು. ಮಹಾರಾಷ್ಟ್ರದಲ್ಲೊಬ್ಬ ಭೂಪ ತನ್ನ ಮೋಜಿಗಾಗಿ ಅಪಾರ್ಟ್‌ಮೆಂಟ್ ನಿವಾಸಿಗಳನ್ನು ಭಯಭೀತರನ್ನಾಗಿಸಿದ್ದಾನೆ.

ಥಾಣೆ ಜಿಲ್ಲೆಯ ಉಲ್ಹಾಸನ್ ನಗರದಲ್ಲಿ ವ್ಯಕ್ತಿಯೊಬ್ಬ ನೇರವಾಗಿ ಅಪಾರ್ಟ್ಮೆಂಟ್‌ಗಳಿಗೆ ರಾಕೆಟ್‌ಗಳನ್ನು ಹಾರಿಸಿದ್ದಾನೆ. ಆತ ಹಾರಿಸಿದ ರಾಕೆಟ್‌ಗಳು ಒಂದರ ಹಿಂದೆ ಒಂದರಂತೆ ಅಪಾರ್ಟ್‌ಮೆಂಟ್‌ನ ಫ್ಲಾಟ್‌ಗಳನ್ನು ಹೆಕ್ಕಿದವು. ಅಪಾರ್ಟ್ಮೆಂಟ್ ಕೆಳಗಿನಿಂದ ಬಾಲ್ಕನಿ ಮೂಲಕ  ರಾಕೆಟ್ ಉಡಾಯಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆ ವ್ಯಕ್ತಿ ಮಾಡಿದ ಕೆಲಸಕ್ಕೆ ನೆಟ್ಟಿಗರು ಕೆಂಡಾಮಂಡಲರಾಗಿದ್ದಾರೆ. ಈ ವಿಡಿಯೋ ವೈರಲ್ ಆದ ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆಗೆ ಕಾರಣರಾದ ವ್ಯಕ್ತಿಯನ್ನು ಬಂಧಿಸಲು ಹುಡುಕಾಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!