ಚಲಿಸುತ್ತಿದ್ದ ಬಸ್ಸಿನಲ್ಲಿದ್ದ ಕುದುರೆ ಚಿತ್ರ ನೋಡಿ ಹಿಂಬಾಲಿಸಿದ ನಿಜವಾದ ಕುದುರೆ! ವಿಡಿಯೋ ನೋಡಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕೊಯಮತ್ತೂರು ಜಿಲ್ಲೆಯಲ್ಲಿ ಚಲಿಸುತ್ತಿದ್ದ ಖಾಸಗಿ ಬಸ್ಸಿನ ಹೊರಭಾಗದಲ್ಲಿದ್ದ ಕುದುರೆ ಪೈಂಟಿಂಗ್ ಗಮನಿಸಿದ ನಿಜವಾದ ಕುದುರೆಯೊಂದು ಬಸ್ಸನ್ನು ಹಿಂಬಾಲಿಸಿ ಓಡುತ್ತಿರುವ ವಿಡಿಯೋ ಜನರನ್ನು ಸೆಳೆಯುತ್ತಿದೆ.
ಬಸ್ಸಿನಲ್ಲಿದ್ದ ಕುದುರೆಯ ಚಿತ್ರವನ್ನು ತನ್ನ ತಾಯಿ ಎಂದು ಭಾವಿಸಿದ ಕುದುರೆ ಮರಿಯು ಬಸ್ಸಿನ ಪಕ್ಕದಲ್ಲಿ ಓಡಿದೆ. ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಪಟ್ಟೀಶ್ವರರ್ ದೇವಸ್ಥಾನದ ಬಳಿ ಈ ದೃಶ್ಯ ನೋಡಿದ ದಾರಿಹೋಕರೊಬ್ಬರು ವೈರಲ್ ವೀಡಿಯೊವನ್ನು ಸೆರೆಹಿಡಿದಿದ್ದಾರೆ.
ಕೊಯಮತ್ತೂರಿನ ಪಟ್ಟೀಶ್ವರರ್ ದೇವಾಲಯದ ಬಳಿ, ದರ್ಪಣಂ ಮಂಟಪಂ ಮತ್ತು ಪಟ್ಟಿತುರೈ ಪ್ರದೇಶಗಳು 10 ಕ್ಕೂ ಹೆಚ್ಚು ಕುದುರೆಗಳಿಗೆ ನೆಲೆಯಾಗಿದೆ. ಇವುಗಳಲ್ಲಿ ಒಂದು ವಾರದ ಹಿಂದೆ ತಾಯಿ ಕುದುರೆಗಳನ್ನು ಬೇರೆಡೆಗೆ ಕರೆದೊಯ್ದಿದ್ದರಿಂದ ಮರಿ ಕುದುರೆಗಳು ತಮ್ಮ ತಾಯಿಯನ್ನು ಹುಡುಕುತ್ತಿದ್ದವು.
ಸೆ. 12 ರಂದು ಕೊಯಮತ್ತೂರಿಸತ್ತ ಸಂಚರಿಸುತ್ತದ್ದ ಬಸ್‌ ಪೆರೂರ್ ಬಸ್ ನಿಲ್ದಾಣದ ಬಳಿ ಸಾಗುತ್ತಿದ್ದ ಬಸ್‌ ಅನ್ನು ಗಾಂಧಿನಗರದ ಬಳಿ ನಿಲುಗಡೆ ಮಾಡಲಾಗಿತ್ತು. ಆಗ ಅದರಲ್ಲಿ ಕುದುರೆ ಚಿತ್ರವಿರುವುದನ್ನು ನೋಡಿದ ಮರಿ ಕುದುರೆ ಬಸ್ಸಿನ ಬಳಿ ಬಂದು ಚಿತ್ರದಲ್ಲಿದ್ದ ಕುದುರೆಯನ್ನು ತಲೆ ಮೂಲಕ ಸ್ಪರ್ಶಿಸಿದೆ. ಈ ಸಂದರ್ಭದಲ್ಲಿ ಬಸ್ಸು ಹೊರಟಿದ್ದು, ಕುದರೆ ಕೂಡಾ ಕುದುರೆ ಚಿತ್ರಕ್ಕೆ ಸಮಾನಾಂತರವಾಗಿ ಬಸ್ಸಿನೊಂದಿಗೆ ಓಡಿದೆ.

ಓಡುತ್ತಿದ್ದ ಬಸ್ ನೋಡುತ್ತಾ ಕಿರುಚುತ್ತಾ ಚಿತ್ರವನ್ನು ನೋಡುತ್ತಾ ಅದನ್ನು ಹಿಂಬಾಲಿಸಿಕೊಂಡು ಸಾಕಷ್ಟು ದೂರ ಬಂದಿದೆ. ಇದನ್ನು ನೋಡಿದ ದಾರಿಹೋಕರು ಆಶ್ಚರ್ಯಚಕಿತರಾಗಿದ್ದಾರೆ. ಕುದುರೆಯ ಚಟುವಟಿಕೆಯನ್ನು ರೆಕಾರ್ಡ್ ಮಾಡಿ ಅದನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದಾರೆ. ನಂತರ ಅದು ವೈರಲ್ ಆಗಿದೆ. ಕುದುರೆಯ ಕರುಣಾಜನಕ ಕತೆ ಬಗ್ಗೆ ಸಾಕಷ್ಟು ಜನರು ಕಂಬನಿ ಮಿಡಿದಿದ್ದು, ಆದಷ್ಟು ಬೇಗ ಅದನ್ನು ಅದರ ತಾಯಿಯೊಂದಿಗೆ ಸೇರಿಸುವಂತೆ ಕೇಳಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!