ವಿದೇಶಿ ಮಹಿಳೆಯ ಕನ್ನಡದ ಪ್ರೀತಿ ನೋಡಿ: ವೈರಲ್‌ ವೀಡಿಯೋ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಆಟೋ ಪ್ರಯಾಣದ ವಿಷಯ ಬಂದಾಗ ಚೌಕಾಶಿ ಮಾಡುವುದನ್ನು ಎಲ್ಲರೂ ಮಾಡುತ್ತಾರೆ. ಆದರೆ ಇಲ್ಲೊಬ್ಬಳು ವಿದೇಶಿ ಮಹಿಳೆ ಆಟೋ ಚಾಲಕನ ಬಳಿ ಚೌಕಾಶಿ ಮಡಿದ್ದಾಳೆ ಅದೂ ಕೂಡ ಕನ್ನಡದಲ್ಲಿ. ಮೂಲತಃ ಈ ಮಹಿಳೆ ಜರ್ಮನ್‌ ದೇಶದವಳು ಎನ್ನಲಾಗಿದ್ದು ನಿರರ್ಗಳವಾಗಿ ಸ್ಫುಟವಾಗಿ ಕನ್ನಡ ಮಾತನಾಡಿರುವ ಆಕೆಯ ವವಿಡಿಯೋ ಇದೀಗ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಇನ್ಫ್ಲುಯೆನ್ಸರ್‌ ಆಗಿರುವ ಜೆನ್ನಿಫರ್ ಎಂಬಾಕೆ ಕನ್ನಡದಲ್ಲಿ ಮಾತನಾಡಿರುವ ವಿಡಿಯೋವನ್ನು ಶೇರ್ ಮಾಡಿದ್ದು, ಹಿಂಬಾಲಕರಿಂದ ಭಾರೀ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ವೈರಲ್ ವೀಡಿಯೊದಲ್ಲಿ, ಜೆನ್ನಿಫರ್ ಆಟೋ ಪ್ರಯಾಣಿಕರಂತೆ ಮತ್ತು ಆಕೆಯ ಸ್ನೇಹಿತ – ಎಜ್ರಾ – ಆಟೋ ಡ್ರೈವರ್ ಆಗಿ ಕಾಣಿಸಿಕೊಂಡಿದ್ದಾರೆ.

“ನಾನು ದೇವರಾಜ ಮಾರ್ಕೆಟ್ ಹೋಗ್ಬೇಕು” ಎಂದು ಆಟೋ ಡ್ರೈವರ್‌ ಗೆ ಅವಳು ಹೇಳುತ್ತಾಳೆ ಡ್ರೈವರ್ ದುಬಾರಿ ಬೆಲೆಯನ್ನು ಹೇಳಿದಾಗ, ಅವಳು ಕೋಪದಿಂದ ಹೇಳುತ್ತಾಳೆ: ‘ಏನು ಹುಚ್ಚಾ? ಕಮ್ಮಿ ಮಾಡಿ!ʼ ಎಂದು ಸ್ಪಷ್ಟವಾಗಿ ಕನ್ನಡ ಮಾತನಾಡುವ ಅವಳ ವಿಡಿಯೋ ಇಲ್ಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!