ಮರಿ ಹಿಡಿಯಲು ಹೋದ ಯುವಕನನ್ನು ಅಟ್ಟಾಡಿಸಿ ಕಚ್ಚಿದ ಹೆಬ್ಬಾತು! ವಿಡಿಯೋ ನೋಡಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ನೀವೆಷ್ಟೇ ಶಕ್ತಿಶಾಲಿಯಾಗಿದ್ದರೂ, ತನ್ನ ಮಕ್ಕಳನ್ನು ರಕ್ಷಿಸಲು ಪ್ರಯತ್ನಿಸುವ ತಾಯಿಯೊಂದಿಗೆ ಹೋರಾಡಿ ಗೆಲ್ಲಲು ಸಾಧ್ಯವಿಲ್ಲ ಎಂಬುದು ಹೆಬ್ಬಾತು ಕುಟುಂಬಕ್ಕೆ ಸಂಬಂಧಿಸಿದ ಈ ವೈರಲ್ ವೀಡಿಯೊದಿಂದ ಮತ್ತೊಮ್ಮೆ ಸಾಬೀತಾಗಿದೆ. ಮಕ್ಕಳು ಸಣ್ಣದೊಂದು ಬೆದರಿಕೆ ಅನುಭವಿಸಿದರೂ ತಾಯಿ ಎಷ್ಟು ಆಕ್ರಮಣಕಾರಿ ಆಗುತ್ತಾಳೆ ಎಂಬುದನ್ನು ಈ ವಿಡಿಯೋ ತೋರಿಸುತ್ತದೆ.
ಎರಡು ಪೋಷಕ ಹೆಬ್ಬಾತು ಹಕ್ಕಿಗಳು ತಮ್ಮ ಮರಿಗಳನ್ನು ರಸ್ತೆಯ ಪಕ್ಕದ ಕಾಲುದಾರಿಯ ಉದ್ದಕ್ಕೂ ಸಾಗಿಸುತ್ತಿರುವ ದೃಶ್ಯದೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ. ಇದನ್ನ ಗಮನಿಸಿದ ಗುಲಾಬಿ ಬಣ್ಣದ ಸ್ವೆಟರ್ ಧರಿಸಿದ ಯುವಕನೊಬ್ಬ ರಸ್ತೆ ದಾಟುತ್ತಿದ್ದ ಮರಿಗಳೊಂದಿಗೆ ಆಟವಾಡಲು ಯತ್ನಿಸುತ್ತಾನೆ. ಅದನ್ನು ನೋಡಿದ ಅವುಗಳ ತಾಯಿಗೆ ಸಿಟ್ಟು ಎಲ್ಲಿತ್ತೋ ನೋಡಿ, ರೌದ್ರಾವತಾರ ತಾಳಿ ಯುವಕನನ್ನು ಅಟ್ಟಾಡಿಸಿಕೊಂಡು ಕಚ್ಚಿದ್ದಾಳೆ. ಯುವಕ ಓಡಿಹೋದರೂ ಬಿಡದೆ ಬೀದಿಯಲ್ಲಿ ಅವನನ್ನು ಬೆನ್ನಟ್ಟುತ್ತಾಳೆ. ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಈ ವೀಡಿಯೊ ಪ್ರಸ್ತುತ ವೈರಲ್ ಆಗುತ್ತಿದ್ದು, ಹಲವಾರು ವೀಕ್ಷಣೆಗಳು ಮತ್ತು ಲೈಕ್ಸ್‌ ಗಳನ್ನು ಪಡೆದಿದೆ.

ವಿಡಿಯೋ ನೋಡಿ ನೇಟಿಜನ್‌ ಗಳು ನಿಂಗಿದು ಬೇಕಿತ್ತಾ ಮಗನೇ..! ಎಂದು ಯುವಕನ ಸ್ಥಿತಿಯನ್ನು ಆಡಿಕೊಂಡು ನಗುತ್ತಿದ್ದಾರೆ. ಈ ವೀಡಿಯೊವನ್ನು ಚಿತ್ರೀಕರಿಸುತ್ತಿದ್ದ ಮಹಿಳೆ ಸಹ ಜೋರಾಗಿ ನಗುವುದನ್ನು ಗಮನಿಸಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!