ಟೀಂ ಇಂಡಿಯಾದಿಂದ ರಜೆ ಪಡೆದು ಅತ್ತೆಯನ್ನು ಭೇಟಿ ಮಾಡಿದ ಹಾರ್ದಿಕ್‌ ಪಾಂಡ್ಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಭಾರತ ಟಿ 20 ವಿಶ್ವಕಪ್‌ ಗೆ ಭರ್ಜರಿ ಸಿದ್ಧತೆಗಳನ್ನು ನಡೆಸುತ್ತಿದೆ. ಮಹತ್ವದ ಟೂರ್ನಿಗೆ ಪರಿಪೂರ್ಣ ತಯಾರಿಯ ಉದ್ದೇಶದಿಂದ ಆಸ್ಟ್ರೇಲಿಯಾ ಹಾಗೂ ಸೌತ್‌ ಆಫ್ರಿಕಾ ವಿರುದ್ಧ ಸರಣಿಗಳನ್ನು ಏರ್ಪಡಿಲಾಗಿದೆ. ಈಗಾಗಲೇ ಆಸಿಸ್‌ ವಿರುದ್ಧ ಸರಣಿ ಗೆದ್ದು ಬೀಗಿರುವ ಟೀಂ ಇಂಡಿಯಾ ಇದೀಗ ಸೆಪ್ಟೆಂಬರ್ 28 ರಿಂದ ಸೌತ್ ಆಫ್ರಿಕಾ ಎದುರಿಗಿನ ಟಿ20 ಕದನಕ್ಕೆ ಸಜ್ಜಾಗಿದೆ. ಆದರೆ ಈ ಸರಣಿಯಿಂದ ಸ್ಟಾರ್ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ ನೀಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಸತತವಾಗಿ ಪಂದ್ಯಗಳನ್ನಾಡಿರುವ ಪಾಂಡ್ಯ ಮಿಂಚುತ್ತಿದ್ದಾರೆ.
ಇದೀಗ ಪಾಂಡ್ಯ ಟಿ 20 ವಿಶ್ವಕಪ್‌ ಗೆ ತೆರಳುವ ಮುನ್ನ ಕುಟುಂಬಸ್ಥರ ಭೇಟಿ ಉದ್ದೇಶದಿಂದ ವಿಶ್ರಾಂತಿ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಆಸಿಸ್‌ ವಿರುದ್ಧದ ಅಂತಿಮ ಪಂದ್ಯ ಮುಗಿಸಿ ಹೊರಟಿರುವ ಪಾಂಡ್ಯ ಬರೋಬ್ಬರಿ 2 ವರ್ಷಗಳ ಬಳಿಕ ಮೊದಲ ಬಾರಿ ತನ್ನ ಅತ್ತೆಯನ್ನು ಭೇಟಿಯಾಗಿದ್ದಾರೆ. ಹಾರ್ದಿಕ್‌ 2020 ರಲ್ಲಿ ಸರ್ಬಿಯಾ ಮೂಲದ ನಟಿ ನತಾಶಾ ಸ್ಟಾಂಕೋವಿಕ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ ಆ ಬಳಿಕ ನತಾಶಾ ತಾಯಿಯನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ.

ಇದೀಗ ಮೊದಲ ಬಾರಿಗೆ ಪತ್ನಿಯ ಕುಟುಂಬವನ್ನು ಭೇಟಿಯಾದ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಹಾರ್ದಿಕ್‌ ರನ್ನು ನತಾಶಾ ಕುಟುಂಬ ಸದಸ್ಯರು ಪ್ರೀತಿಯಿಂದ ಸ್ವಾಗತಿಸುವುದನ್ನು ಕಾಣಬಹುದು. “ವೀಡಿಯೋ ಮತ್ತು ಫೋನ್ ಕರೆಗಳಿಂದ ವೈಯಕ್ತಿಕವಾಗಿ ಭೇಟಿಯಾಗುವವರೆಗೆ, ಮೊದಲ ಬಾರಿಗೆ ನತಾಶಾ (ಈಗ ನನ್ನದೂ ಕೂಡಾ) ಕುಟುಂಬವನ್ನು ಭೇಟಿಯಾಗುತ್ತಿರುವುದು ಅದ್ಭುತವಾಗಿದೆ. ಈ ರೀತಿಯ ಕ್ಷಣಗಳಿಗಾಗಿ ಕೃತಜ್ಞರಾಗಿರುತ್ತೇನೆ” ಎಂದು ಬರೆದುಕೊಂಡು ಹಾರ್ದಿಕ್ ವೀಡಿಯೊವನ್ನು  ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ವೀಡಿಯೊದಲ್ಲಿ, ನತಾಶಾ ಅವರ ಕುಟುಂಬ ಸದಸ್ಯರು ಮೊದಲ ಬಾರಿಗೆ ಹಾರ್ದಿಕ್ ಅವರನ್ನು ಭೇಟಿಯಾದಾಗ ಭಾವುಕರಾಗಿರುವುದನ್ನು ಕಾಣಬಹುದು. ಹಾರ್ದಿಕ್‌ ಅವರು ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ T20 ವಿಶ್ವಕಪ್ 2022 ಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಹಾರ್ದಿಕ್‌ ಕುಟುಂಬಸ್ಥರನ್ನು ಭೇಟಿಯಾಗಿ ತಂಡವನ್ನು ಕೂಡಿಕೊಳ್ಳಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!