ಸಮಾಜದ ಅಭಿವೃದ್ಧಿಗೆ ಒಗ್ಗಟ್ಟಾಗಿ ಶ್ರಮಿಸೋಣ :ಶಾಸಕ ದತ್ತಾತ್ರೇಯ ಪಾಟೀಲ್

ಹೊಸದಿಗಂತ ವರದಿ ಕಲಬುರಗಿ:

ಸಮಾಜದ ಸವ೯ತೋಮುಖ ಅಭಿವೃದ್ಧಿಗಾಗಿ ಸಮಾಜದ ಎಲ್ಲಾ ಭಾಂದವರು ಒಗ್ಗಟ್ಟಾಗಿ ಶ್ರಮಿಸಬೇಕಿದೆ ಎಂದು ಕೆಕೆಆರಡಿಬಿ ಅಧ್ಯಕ್ಷ ಹಾಗೂ ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅವರು ಮಂಗಳವಾರ ನಗರದ ಜಗತ್ ವೃತ್ತದಲ್ಲಿರುವ ಜಗಜ್ಯೋತಿ ಬಸವೇಶ್ವರರ ಪುತ್ಥಳಿ ಆವರಣದ 87.60 ಲಕ್ಷದ ಅಭಿವೃದ್ಧಿ ಕಾಮಗಾರಿಯ ಭೂಮಿ ಪೂಜೆ ನೆರವೆರಿಸಿದ ಬಳಿಕ ವೇದಿಕೆ ಕಾಯ೯ಕ್ರಮದಲ್ಲಿ ಮಾತನಾಡಿದರು. ನಾನು ಅಧ್ಯಕ್ಷನಾದ ಮೇಲೆ ಮೊಟ್ಟ ಮೊದಲ ಬಾರಿಗೆ ಅಧ್ಯಕ್ಷರ ವಿವೇಚನಾ ಅನುದಾನದಡಿ ಬಸವೇಶ್ವರರ,ಅಂಬೇಡ್ಕರರ ಹಾಗೂ ಬಾಬು ಜಗಜೀವನ ರಾವರ ಆವರಣದ ಸೌಂದರ್ಯೀಕರಣ ಅಭಿವೃದ್ಧಿಗೆ ಹಣ ನೀಡಿರುವುದು ಸಂತಸ ತಂದಿದೆ ಎಂದರು.

ಕಾಯ೯ಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಚವದಾಪುರಿ ಹಿರೇಮಠದ ಶ್ರೀ ರಾಜಶೇಖರ ಶಿವಾಚಾರ್ಯರು, ಸಮಾಜದ ಮುಖಂಡರು ಬಸವೇಶ್ವರರ ಮೂತಿ೯ ಬದಲಾಯಿಸಿ, ವಿಶೇಷವಾದ ಹೊಸ ಮೂತಿ೯ ಪ್ರತಿಷ್ಟಾಪನೆ ಮಾಡಿದರೇ, ನಮ್ಮ ಮಠದ ವತಿಯಿಂದ 1 ಲಕ್ಷ ದೇಣಿಗೆ ನೀಡಲಾಗುವುದು ಎಂದು ಘೋಷಣೆ ಮಾಡಿದರು.

ಕಲಬುರಗಿ ಸಂಸದ ಡಾ, ಉಮೇಶ್ ಜಾಧವ,ಸಮಾಜದ ಮುಖಂಡರುಗಳಾದ ಅರುಣ್ ಕುಮಾರ್ ಪಾಟೀಲ್, ಶರಣು ಮೋದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಬಸವರಾಜ ದೇಶಮುಖ,ಬಸವರಾಜ ಭೀಮಳ್ಳಿ,ದೊಡ್ಡಪ್ಪಗೌಡ ಪಾಟೀಲ್, ರವಿ ಬಿರಾದಾರ್, ನೀಲಕಂಠರಾವ ಮೂಲಗೆ,ಸುಧಾ ಹಾಲಕಾಯಿ,ಪ್ರಭುಲಿಂಗ ಹಾದಿಮನಿ,ಶಶೀಲ ನಮೋಶಿ,ಪ್ರಶಾಂತ್ ಮಾನಕರ್,ಶಿವಕಾಂತ್ ಮಹಾಜನ್,ಶಂಭುಲಿಂಗ ಬಳಬಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!