ಎಲ್ಲೆಲ್ಲೂ ಭಾರತೀಯರೇ…ಎಂದು ಮಹಿಳೆಯ ಅಹಂಕಾರಿ ವರ್ತನೆಯ ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೆಕ್ಸಿಕನ್-ಅಮೆರಿಕನ್ ಮಹಿಳೆಯೊಬ್ಬಳು ನಾಲ್ವರು ಭಾರತೀಯ-ಅಮೆರಿಕನ್ ಮಹಿಳೆಯರನ್ನು ನಿಂದಿಸಿರುವ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ದುರಂಹಕಾರ ಮಿತಿಮೀರಿ ವರ್ತಿಸಿದ ಮೆಕ್ಸಿಕನ್-ಅಮೆರಿಕನ್ ಮಹಿಳೆಯನ್ನು ಅಂತಿಮವಾಗಿ ಪೊಲೀಸರು ಬಂಧಿಸಿದ್ದಾರೆ. ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿರುವ ಪಾರ್ಕಿಂಗ್ ಸ್ಥಳದಲ್ಲಿ ಈ ಘಟನೆ ನಡೆದಿದೆ. ಮೆಕ್ಸಿಕನ್-ಅಮೆರಿಕನ್ ಮಹಿಳೆ ಭಾರತೀಯರು ಎಲ್ಲೆಂದರಲ್ಲಿ ನೆಲೆಸಿದ್ದಾರೆ ಮತ್ತು ಎಲ್ಲಾ ಭಾರತೀಯರು ತಮ್ಮ ದೇಶಕ್ಕೆ ಹಿಂತಿರುಗಬೇಕು ಎಂದು ಅನೇಕ ಕಾಮೆಂಟ್‌ಗಳನ್ನು ಮಾಡಿದ್ದಾಳೆ.

ತಾನು ಭಾರತೀಯರನ್ನು ದ್ವೇಷಿಸುತ್ತೇನೆ ಮತ್ತು ಭಾರತೀಯರು ಉತ್ತಮ ಜೀವನ ನಡೆಸುವುದಕ್ಕಾಗಿಯೇ ಅಮೆರಿಕಾಕ್ಕೆ ಬರುತ್ತಾರೆ ಎಂದು ನಾಲಿಗೆ ಹರಿಬಿಟ್ಟಿದ್ದಾಳೆ. ಪೊಲೀಸರು ಮೆಕ್ಸಿಕನ್-ಅಮೆರಿಕನ್ ಮಹಿಳೆ ಎಸ್ಮೆರಾಲ್ಡಾ ಅಪ್ಟನ್ ಎಂದು ಗುರುತಿಸಿದ್ದು, ಆಕೆಯ ವರ್ತನೆಯನ್ನು ವಿವರಿಸುತ್ತಾ, ವ್ಯಕ್ತಿಯೊಬ್ಬರು ಈ ವೀಡಿಯೊವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ ಮತ್ತು ಅವರ ತಾಯಿ ಇತರ ಮೂವರು ಮಹಿಳೆಯರೊಂದಿಗೆ ಊಟಕ್ಕೆ ಹೋದಾಗ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ.

ಮಹಿಳೆ ಗದರಿ ಮಾತನಾಡುವಾಗ ಆಕೆಯ ತಾಯಿ ಏನೂ ಹೇಳದೆ ಮೌನವಾಗಿ ನೋಡುತ್ತಿದ್ದರು. ನಾನು ಮೆಕ್ಸಿಕನ್-ಅಮೆರಿಕನ್, ನಾನು ಇಲ್ಲಿಯೇ ಹುಟ್ಟಿ ಬೆಳೆದಿದ್ದು ಎಂಬ ಮಾತನ್ನು ವಿಡಿಯೋದಲ್ಲಿ ಹೇಳಿದ್ದಾಳೆ. ಆಕೆಯ ದುರಂಹಕಾರಿ ವರ್ತನೆಯ ವಿಡಿಯೋ ಇದೀಗ ವೈರಲ್‌ ಆಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!